March 31, 2026
Tuesday, March 31, 2026
spot_img

1.5 ಕೋಟಿ ರೂ. ತೆರಿಗೆ ಪಾವತಿ ಬಾಕಿ: ತಮಿಳುನಾಡು ಮಾಜಿ ಸಿಎಂ ದಿ. ಜಯಲಲಿತಾ ಹೈದರಾಬಾದ್ ಬಂಗಲೆಗೆ ಬಿತ್ತು ಬೀಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೃಹತ್ ಹೈದರಾಬಾದ್ ಮಹಾನಗರ ಪಾಲಿಕೆ ಇಂದು ತಮಿಳುನಾಡಿನ ಮಾಜಿ ಸಿಎಂ ದಿ. ಜಯಲಲಿತಾ ಅವರಿಗೆ ಸೇರಿದ್ದ ಹೈದರಾಬಾದ್‌ನ ಐಷಾರಾಮಿ ಬಂಗಲೆಯನ್ನು ಜಪ್ತಿ ಮಾಡಿದೆ .

ಸುಮಾರು 1.5 ಕೋಟಿ ರೂಪಾಯಿಗಳಿಗೂ ಹೆಚ್ಚು ಆಸ್ತಿ ತೆರಿಗೆ ಕಟ್ಟದೇ ಬಾಕಿ ಉಳಿದಿದ್ದು, ಹೀಗಾಗಿ ಪಾಲಿಕೆಯು ಹೈದರಾಬಾದ್‌ನ ಶ್ರೀನಗರ ಕಾಲೋನಿಯಲ್ಲಿರುವ ಬಂಗಲೆಯನ್ನು ಜಪ್ತಿ ಮಾಡಿದೆ .

2016ರಲ್ಲಿ ಜಯಲಲಿತಾ ಅವರ ನಿಧನದ ಬಳಿಕ ಬಂಗಲೆ ಕಾನೂನುಬದ್ಧ ವಾರಸುದಾರರಿಗೆ ಅಧಿಕಾರಿಗಳು ತೆರಿಗೆ ಪಾವತಿಗೆ ನೊಟೀಸ್ ನೀಡಿದ್ದರು. ಆದರೆ ವಾರಸುದಾರರಿಂದ ಯಾವುದೇ ಉತ್ತರ ಬಾರದ ಹಿನ್ನೆಲೆ ಅಧಿಕಾರಿಗಳು ಇಂದು ಸ್ಥಳಕ್ಕೆ ಭೇಟಿ ನೀಡಿ ಕಟ್ಟಡಕ್ಕೆ ಸೀಲ್ ಹಾಕಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !