October 15, 2026
Thursday, October 15, 2026
spot_img

ಮಗುವಿನ ಚಿಕಿತ್ಸೆಗೆ ದುಡ್ಡಿಲ್ಲ, ಅರ್ಧ ಗಂಟೆ ಕೊಡಿ ಹಣ ಹೊಂದಿಸ್ತೀನಿ ಎಂದು ಆಸ್ಪತ್ರೆಯಿಂದ ಎಸ್ಕೇಪ್‌ ಆದ ತಾಯಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎರಡು ದಿನದ ಹಿಂದಷ್ಟೇ ಜನಿಸಿದ ಪುಟ್ಟ ಕಂದನನ್ನು ಆಸ್ಪತ್ರೆಯಲ್ಲೇ ಬಿಟ್ಟು ತಾಯಿ ಓಡಿಹೋದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ದೇವನಹಳ್ಳಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೆರಿಗೆಗೆಂದು ಮಹಿಳೆ ಆಗಮಿಸಿದ್ದರು. ಗಂಡು ಮಗು ಜನಿಸಿತ್ತು. ಆದರೆ ಮಗುವಿನ ತೂಕ ಕಡಿಮೆ ಹಾಗೂ ಉಸಿರಾಟದ ತೊಂದರೆ ಇತ್ತು. ದೇವನಹಳ್ಳಿಯ ಆಂಬುಲೆನ್ಸ್‌ ಮೂಲಕ ತಾಯಿ ಹಾಗೂ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆಗೆ ಹೆಚ್ಚು ಹಣ ಆಗಲಿದೆ, ನಾನು ಹೋಗಿ ದುಡ್ಡು ಹೊಂದಿಸಿಕೊಂಡು ಬರ್ತೀನಿ ಎಂದು ಹೇಳಿ ತಾಯಿ ಆಸ್ಪತ್ರೆಯಿಂದ ಹೊರಗೆ ಹೋಗಿದ್ದ ತಾಯಿ ಮತ್ತೆ ವಾಪಾಸ್‌ ಬಂದಿಲ್ಲ!

ಸದ್ಯ ಎನ್‌ಐಸಿಯುನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ ಎಷ್ಟು ಸಮಯವಾದರೂ ಆಸ್ಪತ್ರೆಗೆ ವಾಪಾಸಾಗದ ಕಾರಣ ವೈದ್ಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.ತಾಯಿಗೆ ಮದುವೆಯಾಗದೆಯೇ ಮಗು ಜನಿಸಿದ್ದು ಅವರು ಓಡಿಹೋಗಲು ಕಾರಣ ಇರಬಹುದು ಎನ್ನಲಾಗಿದೆ. ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಅತ್ತ ದೇವನಹಳ್ಳಿ ಖಾಸಗಿ ಆಸ್ಪತ್ರೆಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆಸ್ಪತ್ರೆಯಲ್ಲಿ ಯುವತಿ ನೀಡಿರುವ ಆಧಾರ್ ಕಾರ್ಡ್ನಲ್ಲಿ ಹಾವೇರಿ ಮೂಲದ ವಿಳಾಸ ಪತ್ತೆಯಾಗಿದೆ. ಹೀಗಾಗಿ ಯುವತಿ ಪತ್ತೆ ಹಚ್ಚುವ ಕೆಲಸ ಮಾಡಬೇಕಿದೆ.

Must Read