May 21, 2026
Thursday, May 21, 2026
spot_img

ಇರಾನ್‌ನಿಂದ ಭಾರತೀಯ ಪ್ರಜೆಗಳ ಸುರಕ್ಷಿತ ಸ್ಥಳಾಂತರ: ಅಜೆರ್ಬೈಜಾನ್‌ಗೆ ಕೃತಜ್ಞತೆ ಸಲ್ಲಿಸಿದ ಭಾರತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯ ಪ್ರಾಚ್ಯದಲ್ಲಿನ ಸಂಘರ್ಷದ ನಡುವೆ ಇರಾನ್‌ನಿಂದ ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕೆ ಸಹಾಯ ಮಾಡಿದ ಅಜೆರ್ಬೈಜಾನ್‌ಗೆ ಮೋದಿ ಸರ್ಕಾರ ಕೃತಜ್ಞತೆ ಸಲ್ಲಿಸಿದೆ.

ಅಜೆರ್ಬೈಜಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು, ಪ್ರಜೆಗಳ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಸಾಥ್ ನೀಡಿದ್ದಕ್ಕೆ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದರು.

ಇದೇ ವೇಳೆ ಅಜೆರ್ಬೈಜಾನ್‌ನ ಭಾರತೀಯ ರಾಯಭಾರಿ ಅಭಯ್ ಕುಮಾರ್, ಇರಾನ್ ನಿಂದ ಸ್ಥಳಾಂತರಗೊಂಡ ಭಾರತೀಯ ಪ್ರಜೆಗಳನ್ನು ಭೇಟಿಯಾಗಿದ್ದು, ಅವರ ಅರೋಗ್ಯ ಹಾಗೂ ಯೋಗಕ್ಷೇಮ ವಿಚಾರಿಸಿದರು . ಈ ವೇಳೆ ಭಾರತೀಯ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು . ಜೊತೆಗೆ ಭಾರತ ಸರಕಾರದ ಸಹಾಯಕ್ಕೆ ತೃಪ್ತಿ ವ್ಯಕ್ತಪಡಿಸಿದರು.

ಸದ್ಯ 200ಕ್ಕೂ ಹೆಚ್ಚು ಭಾರತೀಯರ ರಕ್ಷಣೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯಲ್ಲೂ ಸಹಾಯ ಮಾಡಲು ನಾವು ಸಿದ್ದ ಎಂದು ರಾಯಭಾರಿ ಕುಮಾರ್ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !