October 8, 2026
Thursday, October 8, 2026
spot_img

ಭಾರತಕ್ಕೆ 5ನೇ ಪದಕ: ಬೆಳ್ಳಿ ಗೆಲುವಿನೊಂದಿಗೆ ಮಿಂಚಿದ ಜ್ಞಾನೇಶ್ವರಿ ಯಾದವ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಮನ್‌ವೆಲ್ತ್ ಕ್ರೀಡಾಕೂಟ 2026ರಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದ್ದು, ಮಹಿಳೆಯರ 53 ಕೆಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಜ್ಞಾನೇಶ್ವರಿ ಯಾದವ್ ಬೆಳ್ಳಿ ಪದಕ ಗೆದ್ದಿದ್ದಾರೆ. 88 ಕೆಜಿ ಸ್ನ್ಯಾಚ್ ಹಾಗೂ 111 ಕೆಜಿ ಕ್ಲೀನ್ ಅಂಡ್ ಜರ್ಕ್‌ ಸೇರಿ ಒಟ್ಟು 199 ಕೆಜಿ ಭಾರ ಎತ್ತುವ ಮೂಲಕ ಅವರು ಎರಡನೇ ಸ್ಥಾನ ಪಡೆದರು.

ನೈಜೀರಿಯಾದ ಒನೋಮೆ ಒಮೊಲೊಲಾ ಡಿಡಿಹ್ 206 ಕೆಜಿ ಭಾರ ಎತ್ತಿ ಚಿನ್ನದ ಪದಕ ಗೆದ್ದರೆ, ಕೆನಡಾದ ರೆಬೆಕಾ ಗ್ರೌಕ್ಸ್ 178 ಕೆಜಿಯೊಂದಿಗೆ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಇದನ್ನೂ ಓದಿ:

ಸ್ಪರ್ಧೆಯ ಆರಂಭದಿಂದಲೇ ಉತ್ತಮ ಪ್ರದರ್ಶನ ನೀಡಿದ ಜ್ಞಾನೇಶ್ವರಿ, ಕ್ಲೀನ್ ಅಂಡ್ ಜರ್ಕ್‌ನಲ್ಲಿ ಕೆಲ ಹೊತ್ತು ಅಗ್ರಸ್ಥಾನಕ್ಕೇರಿದ್ದರು. ಆದರೆ ಅಂತಿಮ ಹಂತದಲ್ಲಿ ನೈಜೀರಿಯಾ ಆಟಗಾರ್ತಿ ಮೇಲುಗೈ ಸಾಧಿಸಿದರು.

ಈ ಸಾಧನೆಯೊಂದಿಗೆ ಕಾಮನ್‌ವೆಲ್ತ್ ಕ್ರೀಡಾಕೂಟದ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಭಾರತಕ್ಕೆ ನಾಲ್ಕನೇ ಪದಕ ಲಭಿಸಿದಂತಾಗಿದೆ. ಇದಕ್ಕೂ ಮುನ್ನ ಮೀರಾಬಾಯಿ ಚಾನು ಚಿನ್ನ, ರಿಷಿಕಾಂತ ಸಿಂಗ್ ಹಾಗೂ ರಾಜಾ ಮುತ್ತುಪಾಂಡಿ ಬೆಳ್ಳಿ ಪದಕಗಳನ್ನು ಗೆದ್ದಿದ್ದರು.

Must Read