March 31, 2026
Tuesday, March 31, 2026
spot_img

ಹುಬ್ಬಳ್ಳಿ-ಧಾರವಾಡದ ಜನತೆಗೆ ಗುಡ್ ನ್ಯೂಸ್: ಅತಿ ಶೀಘ್ರದಲ್ಲೇ ಹಾರಡಲಿದೆ ಮತ್ತೊಂದು ವಿಮಾನ!

ಹೊಸದಿಗಂತ ವರದಿ, ಹುಬ್ಬಳ್ಳಿ;

ವಾಣಿಜ್ಯ ನಗರಿ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ, ಮಧ್ಯಕರ್ನಾಟಕ ತ್ವರಿತ ಸಂಪರ್ಕಕ್ಕೆ ಅನುಕೂಲ ಆಗುವಂತೆ “ಹುಬ್ಬಳ್ಳಿ-ಬೆಂಗಳೂರು-ಹೈದರಾಬಾದ್” ನಡುವೆ ಅತಿ ಶೀಘ್ರದಲ್ಲೇ ಹೊಸದೊಂದು ವಿಮಾನ ಸೇವೆ ಲಭ್ಯವಾಗಲಿದೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪ್ರಯತ್ನದ ಫಲವಾಗಿ ಎಪ್ರಿಲ್ ಎರಡನೇ ವಾರ fly91 ವಿಮಾನಯಾನ ಆರಂಭವಾಗಲಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಂಸ್ಥೆಗೆ ಕಾರ್ಯಕ್ಕೆ ಸ್ಥಳಾವಕಾಶ ನೀಡಲಾಗಿದೆ.

ಹುಬ್ಬಳ್ಳಿಯಿಂದ ಬೆಂಗಳೂರು ಮತ್ತು ಹೈದರಾಬಾದ್ ತೆರಳುವ ನಾಗರಿಕರಿಗೆ ತ್ವರಿತ ಪ್ರಯಾಣಕ್ಕೆ ಅನುಕೂಲ ಆಗುವಂತೆ ವಿಮಾನ ಸೇವೆ ಆರಂಭಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಈ ಹಿಂದೆ ಏರ್ ಲೈನ್ಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಗಮನ ಸೆಳೆದಿದ್ದರು. ಅದರಂತೆ ಸಂಸ್ಥೆ ಇದೀಗ ಈ ಮಾರ್ಗದಲ್ಲಿ ವಿಮಾನಯಾನಕ್ಕೆ ಅಣಿಯಾಗಿದೆ.

ಸಚಿವ ಜೋಶಿ ಅವರ ಮನವಿ ಪುರಸ್ಕರಿಸಿದ ಸಂಸ್ಥೆ ಹುಬ್ಬಳ್ಳಿ-ಬೆಂಗಳೂರು-ಹೈದರಾಬಾದ್ ಮಧ್ಯೆ ವಿಮಾನ ಹಾರಾಟಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, HYD to HBX: IC3401; 3:00 PM – 4:30 PM, HBX to BLR: IC3411; 4:55 PM – 6:15 PM, BLR to HBX: IC3412; 6:45 PM – 8:15 PM, HBX to HYD: IC3402; 8:35 PM – 9:55 PM ವಿಮಾನಯಾನ ಸೇವೆಯ ವೇಳಾಪಟ್ಟಿ ಸಹ ಬಿಡುಗಡೆ ಮಾಡಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಈ ಸಂಸ್ಥೆಗೆ ಕಾರ್ಯ ನಿರ್ವಹಿಸಲು ಸ್ಥಳ ಸಹ ಮೀಸಲಿಡಲಾಗಿದೆ. ಸಂಸ್ಥೆಯು ಅವಶ್ಯಕ ಕಾರ್ಯಗಳನ್ನು ಪ್ರಾರಂಭಿಸಿದೆ. ಇದಕ್ಕಾಗಿ ಸಚಿವ ಜೋಶಿ ಅವರು ಸಂಸ್ಥೆಯ ಆಡಳಿತ ಮಂಡಳಿಗೆ ಧನ್ಯವಾದ ಅರ್ಪಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !