ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟರಾಜನ್, ಎನ್ಗಿಡಿ ಮಾರಕ ಬೌಲಿಂಗ್ ದಾಳಿಗೆ ಲಖನೌ ಸೂಪರ್ ಜೈಂಟ್ಸ್ ತತ್ತರಿಸಿದ್ದು, ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 141 ರನ್ಗಳಿಗೆ ಆಲೌಟ್ ಆಗಿದೆ. ಹೀಗಾಗಿ ದೆಹಲಿ ಗೆಲುವಿಗೆ ಸುಲಭ ಟಾರ್ಗೆಟ್ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಲಖನೌ ಉತ್ತಮ ಆರಂಭ ಪಡೆಯಲಿಲ್ಲ. ಕ್ಯಾಪ್ಟನ್ ಪಂತ್ 7 ರನ್ ಗೆ ಔಟಾದರೆ ಮಾರ್ಕ್ರಮ್ 11 ರನ್ಗಳಿಸಿ ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು.
ಆಯುಷ್ ಬದೋನಿ ಡಕ್ ಔಟ್ ಆದರೆ,ನಿಕೋಲಸ್ ಪೂರನ್ 8 ರನ್ಗಳಿಸಿ ಬೌಲ್ಡ್ ಆಗಿ ನಿರಾಶೆ ಮೂಡಿಸಿದರು. ಮುಕುಲ್ ಚೌದರಿ 14 ರನ್ಗಳಿಸಿ ಔಟಾದರು. 36 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ಸಮದ್ ಕ್ಯಾಚ್ ನೀಡಿ ಔಟ್ ಆದರು. ಶಹ್ಬಾಜ್ ಅಹ್ಮದ್ 15 ರನ್ಗಳಿಸಿ ಅಜೇಯರಾಗಿ ಉಳಿದುಕೊಂಡರು.



