April 2, 2026
Thursday, April 2, 2026
spot_img

SHOCKING | ನೀರಿನ ಬಕೆಟ್‌ನಲ್ಲಿ ಬಿದ್ದು ಮಗು ಸಾ*ವು: ಕಂದಮ್ಮ ಸತ್ತಿದ್ದಕ್ಕೆ ಮನನೊಂದು ತಾಯಿ ಆತ್ಮಹ*ತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ಮನಕಲುಕುವ ಘಟನೆ ಬೆಳಕಿಗೆ ಬಂದಿದೆ. 11 ತಿಂಗಳ ಮಗು ಬಾತ್‌ರೂಮ್‌ನಲ್ಲಿದ್ದ ನೀರಿನ ಬಕೆಟ್‌ನಲ್ಲಿ ಬಿದ್ದು ಸಾವನ್ನಪ್ಪಿದ ಕೆಲವೇ ಕ್ಷಣಗಳಲ್ಲಿ, ಆ ದುಃಖವನ್ನು ತಾಳಲಾರದೆ ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ದುರಂತ ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

ಮೃತ ತಾಯಿ ಪ್ರತಿಭಾ (29) ಮತ್ತು ಅವರ ಪತಿ ಮಹಂತೇಶ್ ಇಬ್ಬರೂ ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದು, ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಸುಮಾರು 11 ತಿಂಗಳ ಹಿಂದೆ ಇವರಿಗೆ ಗಂಡು ಮಗು ಜನಿಸಿತ್ತು. ಘಟನೆ ನಡೆದ ವೇಳೆ ಪತಿ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದರೆ, ತಾಯಿ ಮತ್ತು ಮಗು ಮನೆಯಲ್ಲಿ ಮಾತ್ರ ಇದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ

ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರತಿಭಾ ಒಣಗಿಸಿದ್ದ ಬಟ್ಟೆಗಳನ್ನು ತರಲು ಟೆರೆಸ್‌ಗೆ ತೆರಳಿದ್ದಾಗ ಮಗು ಮನೆಯ ಬಾತ್‌ರೂಮ್ ಕಡೆಗೆ ಹೋಗಿದೆ. ಅಲ್ಲಿ ಇದ್ದ ನೀರಿನ ಬಕೆಟ್‌ಗೆ ಮಗು ಬಿದ್ದು ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಮಗುವಿನ ಸ್ಥಿತಿ ಕಂಡು ಆಘಾತಕ್ಕೊಳಗಾದ ಪ್ರತಿಭಾ, ಮಗುವಿನ ಸಾವಿಗೆ ತಾನೇ ಕಾರಣ ಎಂದು ನೊಂದು ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದಾರೆ. ಮನೆಗೆ ಮರಳಿದ ಪತಿ ಪತ್ನಿ ಬಾಗಿಲು ತೆರೆಯದಿದ್ದರಿಂದ ಸ್ಪೇರ್ ಕೀ ಮೂಲಕ ಒಳಗೆ ಹೋಗಿ ತಾಯಿ-ಮಗುವಿನ ಶವಗಳನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !