April 2, 2026
Thursday, April 2, 2026
spot_img

50 ವರ್ಷಗಳ ಬಳಿಕ ಚಂದ್ರನೆಡೆಗೆ ‘ಮಾನವರ ಹೆಜ್ಜೆ’: ನಾಸಾದ ಆರ್ಟೆಮಿಸ್-II ಮಿಷನ್ ಯಶಸ್ವಿ ಉಡಾವಣೆ

ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಾಸಾದ ಮಹತ್ವಾಕಾಂಕ್ಷಿ ಆರ್ಟೆಮಿಸ್-II ಮಿಷನ್ ಯಶಸ್ವಿಯಾಗಿ ಉಡಾವಣೆಯಾಗಿ, ಸುಮಾರು ಐದು ದಶಕಗಳ ಬಳಿಕ ಮತ್ತೆ ಮಾನವರನ್ನು ಚಂದ್ರನ ಸಮೀಪಕ್ಕೆ ಕಳುಹಿಸುವ ಐತಿಹಾಸಿಕ ಹೆಜ್ಜೆ ಇಡಲಾಗಿದೆ.

50 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಗಗನಯಾತ್ರಿಗಳಿದ್ದ ನೌಕೆ ಚಂದ್ರನತ್ತ ಪಯಣ ಆರಂಭಿಸಿರುವುದು ಜಾಗತಿಕವಾಗಿ ಗಮನ ಸೆಳೆದಿದೆ.

ಅತ್ಯಂತ ಶಕ್ತಿಶಾಲಿ ಸ್ಪೇಸ್ ಲಾಂಚ್ ಸಿಸ್ಟಮ್ (SLS) ರಾಕೆಟ್ ಮೂಲಕ ಒರಾಯನ್ ನೌಕೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿದ್ದು, ಉಡಾವಣೆಯ ಕೆಲವೇ ನಿಮಿಷಗಳಲ್ಲಿ ರಾಕೆಟ್‌ನ ಮುಖ್ಯ ಹಂತ ಬೇರ್ಪಟ್ಟು ನೌಕೆ ಭೂಮಿಯ ಕೆಳ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿದೆ. ನಂತರ ಗಗನಯಾತ್ರಿಗಳು ಸೌರ ಫಲಕಗಳು ಮತ್ತು ಇತರ ತಾಂತ್ರಿಕ ವ್ಯವಸ್ಥೆಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಆರಂಭಿಸಿದ್ದಾರೆ.

ಇದನ್ನೂ ಓದಿ:

ಈ ಮಿಷನ್ ಒಟ್ಟು 10 ದಿನಗಳ ಅವಧಿಯದ್ದಾಗಿದ್ದು, ಗಗನಯಾತ್ರಿಗಳು ಚಂದ್ರನ ಸುತ್ತುಹಾಕಿ ಅಧ್ಯಯನ ನಡೆಸಿ ಭೂಮಿಗೆ ಮರಳಲಿದ್ದಾರೆ. ಚಂದ್ರನ ಮೇಲೆ ಇಳಿಯುವ ಯೋಜನೆ ಈ ಹಂತದಲ್ಲಿ ಇಲ್ಲ; ಬದಲಾಗಿ ಮುಂದಿನ ಆರ್ಟೆಮಿಸ್-III ಮಿಷನ್‌ಗೆ ಅಗತ್ಯವಾದ ತಂತ್ರಜ್ಞಾನ ಮತ್ತು ಸುರಕ್ಷತಾ ವ್ಯವಸ್ಥೆಗಳನ್ನು ಪರೀಕ್ಷಿಸುವುದು ಮುಖ್ಯ ಉದ್ದೇಶವಾಗಿದೆ.

ನಾಸಾದ ಈ ಪ್ರಯೋಗ ಮುಂದಿನ ದಿನಗಳಲ್ಲಿ ಚಂದ್ರನಲ್ಲಿ ದೀರ್ಘಕಾಲೀನ ಸಂಶೋಧನೆ ಹಾಗೂ ಮಂಗಳ ಗ್ರಹಕ್ಕೆ ಮಾನವರನ್ನು ಕಳುಹಿಸುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

ಚಂದ್ರನೆಡೆಗೆ ಹೋದವರ್ಯಾರು?

ರೀಡ್ ವೈಸ್‌ಮನ್ : ಮಿಷನ್ ಕಮಾಂಡರ್.
ವಿಕ್ಟರ್ ಗ್ಲೋವರ್ : ಪೈಲಟ್ (ಚಂದ್ರನತ್ತ ಪ್ರಯಾಣಿಸುವ ಮೊದಲ ಕಪ್ಪು ವರ್ಣೀಯ ವ್ಯಕ್ತಿ).
ಕ್ರಿಸ್ಟಿನಾ ಕೋಚ್ : ಮಿಷನ್ ಸ್ಪೆಷಲಿಸ್ಟ್ (ಚಂದ್ರನತ್ತ ಪ್ರಯಾಣಿಸುವ ಮೊದಲ ಮಹಿಳೆ).
ಜೆರೆಮಿ ಹ್ಯಾನ್ಸನ್ : ಮಿಷನ್ ಸ್ಪೆಷಲಿಸ್ಟ್ (ಕೆನಡಾ ಬಾಹ್ಯಾಕಾಶ ಸಂಸ್ಥೆ)

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !