November 8, 2026
Sunday, November 8, 2026
spot_img

ಹಾಸನಾಂಬ ದರುಶನಕ್ಕೆ ಭಕ್ತಸಾಗರ: ಇಂದು ಸಿಎಂ ಡಿಕೆಶಿ, ಹೆಚ್‌ಡಿಕೆ ಭೇಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರುಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬ ದೇವಿಯ ಸಾರ್ವಜನಿಕ ದರುಶನಕ್ಕೆ ಇಂದು 10ನೇ ದಿನ. ಭಾನುವಾರದ ರಜಾದಿನದ ಹಿನ್ನೆಲೆಯಲ್ಲಿ ದೇವಿಯ ದರುಶನ ಪಡೆಯಲು ಸಾವಿರಾರು ಭಕ್ತರು ಹಾಸನಕ್ಕೆ ಆಗಮಿಸುತ್ತಿದ್ದಾರೆ.

ಇಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕೂಡ ದೇವಿಯ ದರುಶನ ಪಡೆಯಲಿದ್ದಾರೆ.

ಡಿಕೆಶಿ ಕಾರ್ಯಕ್ರಮ:

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಳಗ್ಗೆ 10.45ರ ಸುಮಾರಿಗೆ ಹೆಲಿಕಾಪ್ಟರ್ ಮೂಲಕ ಹಾಸನಕ್ಕೆ ಆಗಮಿಸಿ ಹಾಸನಾಂಬ ದೇವಿಯ ದರುಶನ ಪಡೆಯಲಿದ್ದಾರೆ. ಬಳಿಕ ಫಲಪುಷ್ಪ ಪ್ರದರ್ಶನ ಹಾಗೂ ಹಾಸನಾಂಬ ಕ್ರೀಡೋತ್ಸವದಲ್ಲಿ ಭಾಗವಹಿಸಲಿದ್ದು, ಬೀಕನಹಳ್ಳಿಯ ಪುರದಮ್ಮ ದೇವಾಲಯಕ್ಕೂ ಭೇಟಿ ನೀಡಲಿದ್ದಾರೆ.

ಇದನ್ನೂ ಓದಿ:

ಹೆಚ್‌ಡಿಕೆ ಭೇಟಿ:

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಬೆಳಗ್ಗೆ 9 ಗಂಟೆಗೆ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರುಶನ ಪಡೆಯಲಿದ್ದಾರೆ. ಬಳಿಕ ಶಾಸಕ ಹೆಚ್.ಪಿ. ಸ್ವರೂಪ್ ಅವರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಬೆಂಗಳೂರಿಗೆ ತೆರಳಲಿದ್ದಾರೆ.

ಭಕ್ತರಿಂದ ತುಂಬಿದ ಸರತಿ ಸಾಲು:

ಭಾನುವಾರದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಧರ್ಮದರುಶನದ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾದು ಭಕ್ತರು ದೇವಿಯ ದರುಶನ ಪಡೆಯುತ್ತಿದ್ದಾರೆ. ಮತ್ತೊಂದೆಡೆ, 1,000 ಮತ್ತು 300 ರೂಪಾಯಿ ವಿಶೇಷ ದರುಶನದ ಸಾಲುಗಳಲ್ಲಿ ಕಡಿಮೆ ಜನಸಂದಣಿ ಕಂಡುಬಂದಿದೆ.

ಒಟ್ಟಾರೆ ರಜಾದಿನದ ಸಂಭ್ರಮ, ಗಣ್ಯರ ಭೇಟಿ ಹಾಗೂ ಭಕ್ತರ ಅಪಾರ ಸಂಖ್ಯೆಯ ಆಗಮನದಿಂದ ಹಾಸನಾಂಬ ದೇವಾಲಯದ ಪರಿಸರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

Must Read

Skip to toolbar