July 28, 2026
Tuesday, July 28, 2026
spot_img

ಪಶ್ಚಿಮ ಬಂಗಾಳದಲ್ಲೇ 15 ದಿನ ಇರುವೆ: ದೀದಿ ನಾಡಲ್ಲಿ ಗುಡುಗಿದ ಅಮಿತ್​ ಶಾ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಬಂಗಾಳ ವಿಧಾನಸಭೆ ಚುನಾವಣಾ ಅಖಾಡ ಈ ಬಾರಿ ಭಾರೀ ಸದ್ದು ಮಾಡುತ್ತಿದ್ದು, ಗೆಲ್ಲಲೇಬೇಕೆಂಬ ಹಠದಲ್ಲಿ ಬಿಜೆಪಿ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಇಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ದಕ್ಷಿಣ ಕೋಲ್ಕತ್ತಾದ ಹಜ್ರಾದಲ್ಲಿ ರೋಡ್​ ಶೋದ ನಡೆಸಿ ಮತಯಾಚನೆ ಮಾಡಿದರು.

ಈ ವೇಳೆ ಗುಡುಗಿದ ಶಾ, ನಾನು ಚುನಾವಣಾ ಪ್ರಚಾರದಲ್ಲಿ 15 ದಿನ ಇಲ್ಲಿಯೇ ಇರುತ್ತೇನೆ. ಈ ಸಲ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಈ ಬಾರಿ ಭವಾನಿಪುರ ಕ್ಷೇತ್ರದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಸೋಲು ಅನುಭವಿಸಲಿದ್ದಾರೆ. ಇಡೀ ಟಿಎಂಸಿ ಅಭ್ಯರ್ಥಿಗಳು ಸೋಲು ಖಚಿತ ಎಂದು ಹೇಳಿದರು.

ಭವಾನಿಪುರದಲ್ಲಿ ಬಿಜೆಪಿ ಗೆಲುವಿನ ಮೂಲಕ ಇಡೀ ರಾಜ್ಯದಲ್ಲಿ ಹೊಸ ಬದಲಾವಣೆ ತರಬೇಕಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಬಂಗಾಳದ ಗಡಿಗಳನ್ನು ಮುಚ್ಚಲಿದ್ದು, ಈ ಮೂಲಕ ಒಳನುಸುಳುಕೋರರನ್ನು ಗುರುತಿಸಿ ದೇಶದಿಂದ ಹೊರಹಾಕಬೇಕಿದೆ ಎಂದು ತಿಳಿಸಿದರು.

ಟಿಎಂಸಿಯ ಗೂಂಡಾಗಿರಿಯಿಂದ ಇಲ್ಲಿನ ಜನರು ಸಂಪೂರ್ಣವಾಗಿ ಬೇಸತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದು ಅಭಿವೃದ್ಧಿಯ ಹೊಸ ಅಲೆಯನ್ನು ತರುತ್ತದೆ ಎಂದು ಭರವಸೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !