July 3, 2026
Friday, July 3, 2026
spot_img

ಗಡಿಯಲ್ಲಿ ಮತ್ತೆ ಹೆಚ್ಚಿದ ಕಿಚ್ಚು: ಭಾರತಕ್ಕೆ ಪಾಕ್ ರಕ್ಷಣಾ ಸಚಿವರಿಂದ ಬಹಿರಂಗ ಬೆದರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಪಾಕಿಸ್ತಾನದ ನಡುವೆ ಗಡಿ ಉದ್ವಿಗ್ನತೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಉಭಯ ದೇಶಗಳ ರಕ್ಷಣಾ ಸಚಿವರ ನಡುವೆ ಮಾತಿನ ಸಮರ ತಾರಕಕ್ಕೇರಿದೆ.

“ಪಾಕಿಸ್ತಾನವು ಗಡಿಯಲ್ಲಿ ಯಾವುದೇ ದುಸ್ಸಾಹಸಕ್ಕೆ ಕೈಹಾಕಿದರೆ ಎಂದೂ ಮರೆಯದ ರೀತಿಯಲ್ಲಿ ತಕ್ಕ ಪ್ರತ್ಯುತ್ತರ ನೀಡಲಾಗುವುದು” ಎಂದು ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್ ಗುರುವಾರವಷ್ಟೇ ಖಡಕ್ ಎಚ್ಚರಿಕೆ ನೀಡಿದ್ದರು.

ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಬಹಿರಂಗ ಬೆದರಿಕೆ ಹಾಕಿದ್ದಾರೆ. “ಮುಂದಿನ ಬಾರಿ ಸಂಘರ್ಷ ನಡೆದರೆ ಅದು ಕೇವಲ ಗಡಿಯ 200-250 ಕಿ.ಮೀ ವ್ಯಾಪ್ತಿಗೆ ಸೀಮಿತವಾಗುವುದಿಲ್ಲ. ನಾವು ಭಾರತದ ಗಡಿಯೊಳಗೆ ನುಗ್ಗಿ ಮನೆಗಳ ಮೇಲೆ ಹಾಗೂ ಆರ್‌ಎಸ್‌ಎಸ್ ಶಿಬಿರಗಳ ಮೇಲೆ ದಾಳಿ ಮಾಡುತ್ತೇವೆ” ಎಂದು ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇದಕ್ಕೂ ಮುನ್ನ ಪಾಕಿಸ್ತಾನದ ಮಾಜಿ ರಾಯಭಾರಿ ಅಬ್ದುಲ್ ಬಾಸಿತ್ ಕೂಡ ಅಮೆರಿಕವು ಪಾಕ್ ಮೇಲೆ ದಾಳಿ ಮಾಡಿದರೂ ನಾವು ದೆಹಲಿ-ಮುಂಬೈ ಮೇಲೆ ದಾಳಿ ನಡೆಸುವುದಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !