ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗು ಹೈದರಾಬಾದ್ ನಡುವಿನ ಪಂದ್ಯದ ಸಮಯ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ 9 ಮಂದಿ ಅಪ್ರಾಪ್ತರು ಸೇರಿದಂತೆ ಒಟ್ಟು 13 ಮಂದಿ ಆರೋಪಿಗಳನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
9 ಮಂದಿ ಬಾಲಕರನ್ನು ವಶಕ್ಕೆ ಪಡೆದು ಬಾಲಮಂದಿರದ ಸುಪರ್ದಿಗೆ ನೀಡಲಾಗಿದ್ದು, ಕಳ್ಳತನ ಮಾಡಿದ್ದ 70 ಮೊಬೈಲ್ಗಳು, ಆರೋಪಿಗಳು ಬಳಸುತ್ತಿದ್ದ 5 ಪೋನ್ ಸೇರಿದಂತೆ ಒಟ್ಟು 75 ಮೊಬೈಲ್ಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಭಂ ಎಂಬಾತ ಪ್ರಕರಣದ ಸೂತ್ರಧಾರನಾಗಿದ್ದು, ಆತ ಅಪ್ರಾಪ್ರರನ್ನ ಬಳಸಿಕೊಂಡು ಕೃತ್ಯವೆಸಗುತ್ತಿದ್ದನು. ಬಾಲ ಆರೋಪಿಗಳು ಮ್ಯಾಚ್ ಟಿ-ಶರ್ಟ್ ಧರಿಸಿ ಕ್ರೀಡಾಂಗಣಕ್ಕೆ ಅಭಿಮಾನಗಳ ರೀತಿ ಬಂದು ಪ್ರವೇಶಿಸಿ ಪೇಕ್ಷಕರ ಗ್ಯಾಲರಿ ಹಾಗೂ ಮೆಟ್ರೋ ನಿಲ್ದಾಣಗಳಲ್ಲಿ ಕಳವು ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೂ ಹಲವಾರು ಈ ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿಯಿದ್ದು, ತನಿಖೆ ಮುಂದುವರೆಸಲಾಗುವುದು. ಸಾರ್ವಜನಿಕರು ಪಂದ್ಯ ವೀಕ್ಷಿಸಲು ಬರುವ ತಮ್ಮ ಮೌಲ್ಯಯುತ ವಸ್ತುಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಮನವಿ ಮಾಡಿದರು.



