October 12, 2026
Monday, October 12, 2026
spot_img

ಆಡಳಿತ-ಪಕ್ಷದ ಸಂಘಟನೆಯಲ್ಲಿ ಮೈಗಳ್ಳತನ ಸಹಿಸೋದಿಲ್ಲ: ಸಿಎಂ ಡಿಕೆಶಿ ಖಡಕ್‌ ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಡಳಿತ ಮತ್ತು ಪಕ್ಷದ ಸಂಘಟನೆಯಲ್ಲಿ ಯಾವುದೇ ರೀತಿಯ ಮೈಗಳ್ಳತನವನ್ನು ಸಹಿಸೋದಿಲ್ಲ ಎಂದು ಸಿಎಂ ಡಿ.ಕೆ ಶಿವಕುಮಾರ್‌ ಖಡಕ್‌ ವಾರ್ನಿಂಗ್‌ ನೀಡಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಹಾಗೂ ಪಕ್ಷದ ನಾಯಕರಿಗೆ ಕಠಿಣ ಸಂದೇಶ ನೀಡಿದ್ದಾರೆ. ಕೆಲಸ ಮಾಡದೇ ಟೈಮ್‌ ಪಾಸ್‌ ಮಾಡೋ ಯಾರನ್ನೂ ಬಿಡೋದಿಲ್ಲ. ಎಲ್ಲರೂ 24/7 ಕೆಲಸ ಮಾಡಬೇಕು. ಬರೀ ಬೆಂಗಳೂರಿನ ಬಗ್ಗೆ ಮಾತ್ರ ಮಾತಾಡ್ತಾ ಇಲ್ಲ. ಎಲ್ಲ ಜಿಲ್ಲೆಗಳಲ್ಲಿಯೂ ರೂಲ್ಸ್‌ ಜಾರಿಗೆ ಬರಬೇಕು. ಕಡ್ಡಾಯ ಪ್ರವಾಸ ಮಾಡಿ, ಸಭೆಗಳನ್ನು ನಡೆಸಿ ಜನರ ಸಮಸ್ಯೆಗೆ ಸ್ಪಂದನೆ ನೀಡಬೇಕು ಎಂದಿದ್ದಾರೆ.

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಕಾಂಗ್ರೆಸ್ ಹೈಕಮಾಂಡ್‌ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಎಸ್‌ಐಆರ್ ವಿಚಾರದಲ್ಲಿ ದೊಡ್ಡ ಸಮಸ್ಯೆಯಿದೆ, ಇದನ್ನು ಯಾರೂ ಹಗುರವಾಗಿ ಪರಿಗಣಿಸುವಂತಿಲ್ಲ ಎಂದು ಎಚ್ಚರಿಸಿರುವ ಸಿಎಂ, ಚುನಾವಣಾ ವ್ಯವಸ್ಥೆಯ ಈ ಪ್ರಮುಖ ಪ್ರಕ್ರಿಯೆಯ ಕಡೆಗೆ ನಾಯಕರು ಹೆಚ್ಚಿನ ಗಮನ ಹರಿಸಬೇಕು ಎಂದು ಸೂಚಿಸಿದ್ದಾರೆ.

Must Read