April 7, 2026
Tuesday, April 7, 2026
spot_img

Health | ನಿಮ್ಮ ದೇಹದಲ್ಲಿ ಇರೋ ಬರೋ ಕ್ಯಾಲ್ಸಿಯಂನ್ನು ಕೂಡ ಖಾಲಿ ಮಾಡಿಬಿಡುತ್ತೆ ಈ ಆಹಾರಗಳು

ನಮ್ಮ ದೇಹಕ್ಕೆ ಕ್ಯಾಲ್ಸಿಯಂ ಅಂದ್ರೆ ಎಲುಬು ಮತ್ತು ಹಲ್ಲುಗಳ ಬಲಕ್ಕೆ ತುಂಬಾ ಮುಖ್ಯವಾದ ಪೋಷಕಾಂಶ. ಆದರೆ ಕೆಲ ಆಹಾರಗಳನ್ನು ಮಿತಿ ಮೀರಿ ತಿನ್ನೋದರಿಂದ ದೇಹದಲ್ಲಿರುವ ಕ್ಯಾಲ್ಸಿಯಂ ಶೋಷಣೆಯೇ ಕಡಿಮೆಯಾಗಬಹುದು. ಇದರಿಂದ ನಿಧಾನವಾಗಿ ಎಲುಬುಗಳು ದುರ್ಬಲವಾಗುವ ಸಾಧ್ಯತೆ ಇದೆ. ಆರೋಗ್ಯಕರ ಆಹಾರ ತಿನ್ನುತ್ತಿದ್ರೂ ಕೆಲವು ಅಭ್ಯಾಸಗಳು ನಿಮ್ಮ ಕ್ಯಾಲ್ಸಿಯಂ ಮಟ್ಟಕ್ಕೆ ಹಾನಿ ಮಾಡಬಹುದು.

ಜಾಸ್ತಿ ಉಪ್ಪು ಇರುವ ಆಹಾರಗಳು
ಚಿಪ್ಸ್, ಪ್ಯಾಕೆಟ್ ಸ್ನ್ಯಾಕ್ಸ್, ಇನ್‌ಸ್ಟಂಟ್ ನೂಡಲ್ಸ್, ಉಪ್ಪಿನಕಾಯಿ ತರಹದ ಆಹಾರಗಳಲ್ಲಿ ಸೋಡಿಯಂ ಹೆಚ್ಚು ಇರುತ್ತದೆ. ದೇಹದಲ್ಲಿ ಉಪ್ಪು ಹೆಚ್ಚಾದರೆ ಮೂತ್ರದ ಮೂಲಕ ಕ್ಯಾಲ್ಸಿಯಂ ಹೆಚ್ಚು ಹೊರಹೋಗುತ್ತದೆ. ಇದರಿಂದ ಎಲುಬುಗಳ ಬಲ ಕಡಿಮೆಯಾಗಬಹುದು.

ಸಾಫ್ಟ್ ಡ್ರಿಂಕ್ಸ್ ಮತ್ತು ಕೋಲ್ಡ್ ಡ್ರಿಂಕ್ಸ್
ಸೋಡಾ ಮತ್ತು ಕಾರ್ಬೊನೇಟೆಡ್ ಪಾನೀಯಗಳಲ್ಲಿ ಇರುವ ಫಾಸ್ಫೋರಿಕ್ ಆಸಿಡ್ ಕ್ಯಾಲ್ಸಿಯಂ ಸಮತೋಲನವನ್ನು ಹಾಳು ಮಾಡಬಹುದು. ವಿಶೇಷವಾಗಿ ಪ್ರತಿದಿನ ಕುಡಿಯುವ ಅಭ್ಯಾಸ ಇದ್ದರೆ ಎಲುಬಿನ ಆರೋಗ್ಯದ ಮೇಲೆ ಪರಿಣಾಮ ಬೀಳಬಹುದು.

ಇದನ್ನೂ ಓದಿ:

ಹೆಚ್ಚು ಕ್ಯಾಫಿನ್
ಚಹಾ, ಕಾಫಿ ಹೆಚ್ಚು ಕುಡಿಯುವವರು ಜಾಗರೂಕರಾಗಬೇಕು. ಕ್ಯಾಫಿನ್ ದೇಹದಿಂದ ಕ್ಯಾಲ್ಸಿಯಂ ಹೊರಹೋಗುವಿಕೆಯನ್ನು ಹೆಚ್ಚಿಸಬಹುದು. ದಿನಕ್ಕೆ 1–2 ಕಪ್ ಮಿತಿಯಲ್ಲಿ ಇರುವುದು ಉತ್ತಮ.

ಜಂಕ್ ಫುಡ್ ಮತ್ತು ಪ್ರೊಸೆಸ್ಡ್ ಫುಡ್
ಪಿಜ್ಜಾ, ಬರ್ಗರ್, ಫ್ರೈಡ್ ಫುಡ್, ಪ್ಯಾಕೆಟ್ ಫುಡ್‌ಗಳಲ್ಲಿ ಪೋಷಕಾಂಶ ಕಡಿಮೆ, ಉಪ್ಪು ಮತ್ತು ಕೊಬ್ಬು ಹೆಚ್ಚು ಇರುತ್ತದೆ. ಇವು ದೇಹಕ್ಕೆ ಬೇಕಾದ ಕ್ಯಾಲ್ಸಿಯಂ ಉಪಯೋಗವನ್ನು ಕಡಿಮೆ ಮಾಡಬಹುದು.

ಜಾಸ್ತಿ ಸಕ್ಕರೆ
ಹೆಚ್ಚು ಸಿಹಿ ಪದಾರ್ಥಗಳು, ಬೇಕರಿ ಐಟಂಗಳು, ಸಿಹಿ ಪಾನೀಯಗಳು ದೇಹದ ಖನಿಜ ಸಮತೋಲನದ ಮೇಲೆ ಪರಿಣಾಮ ಬೀರುತ್ತವೆ.

ಎಲುಬುಗಳು ಬಲವಾಗಿರಬೇಕೆಂದರೆ ಹಾಲು, ಮೊಸರು, ಪನೀರ್, ಎಳ್ಳು, ಬಾದಾಮಿ ಮತ್ತು ಹಸಿರು ಸೊಪ್ಪುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !