September 16, 2026
Wednesday, September 16, 2026
spot_img

ನನಗೆ ಯಾವುದೇ ರೀತಿಯ ಮುನಿಸಿಲ್ಲ: ದಾವಣಗೆರೆ ಅಖಾಡಕ್ಕೆ ಕೊನೆಗೂ ಜಮೀರ್ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಾವಣಗೆರೆ ದಕ್ಷಿಣ ಕ್ಷೇತ್ರ ಉಪಚುನಾವಣೆ ಕಣ ರಂಗೇರುತ್ತಿದ್ದು, ಅಖಾಡಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ಎಂಟ್ರಿ ನೀಡಿ ನಮಗೆ ಯಾವುದೇ ಮುನಿಸಿಲ್ಲ ಎಂಬ ಸಂದೇಶ ಸಾರಿದ್ದಾರೆ.

ದಾವಣಗೆರೆಯಲ್ಲಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಯಾವುದೇ ರೀತಿಯ ಮುನಿಸಿಲ್ಲ, ನಾನು ಕೇರಳದಲ್ಲಿ ಪ್ರಚಾರದಲ್ಲಿ ಇದ್ದ ಕಾರಣ ಇಷ್ಟು ದಿನ ಬರಲು ಸಾಧ್ಯವಾಗಿಲ್ಲ. ಇಲ್ಲಿ ಯಾರು ಬರಲಿ, ಬಿಡಲಿ ಇದು ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂದು ಹೇಳಿದರು.

ನಾನು ಕೇರಳದಲ್ಲಿ ಸ್ಟಾರ್ ಪ್ರಚಾರಕನಾಗಿದ್ದ ಕಾರಣ ಅಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದೆ. ಇಂದು ಇಲ್ಲಿಗೆ ಬರುತ್ತೇನೆ ಎಂದು ಹೇಳಿದ್ದೆ. ಅಭ್ಯರ್ಥಿ ಸಮಥ್೯ ಅವರನ್ನು ಗೆಲ್ಲಿಸಲು ನೂರಕ್ಕೆ ನೂರರಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !