April 7, 2026
Tuesday, April 7, 2026
spot_img

‘IPLಗಿಂತ PSL ಮೇಲೆ ಹೋಗುತ್ತೆ’ ಎಂದ ನಖ್ವಿ: ಹಗಲುಗನಸು ಕಾಣೋದು ಅಂದ್ರೆ ಇದೇ ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ ಸೂಪರ್ ಲೀಗ್ (PSL) ಭವಿಷ್ಯದಲ್ಲಿ ವಿಶ್ವ ಕ್ರಿಕೆಟ್‌ನ ಅಗ್ರ ಟಿ20 ಲೀಗ್ ಆಗಲಿದೆ ಎಂಬ ವಿಶ್ವಾಸವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ವ್ಯಕ್ತಪಡಿಸಿದ್ದಾರೆ. ಐಪಿಎಲ್‌ಗೆ ಸವಾಲು ಹಾಕುವ ಮಟ್ಟಕ್ಕೆ ಪಿಎಸ್‌ಎಲ್ ಬೆಳೆಯಲಿದೆ ಎಂದು ಅವರು ಆತ್ಮವಿಶ್ವಾಸದಿಂದ ಹೇಳಿದ್ದಾರೆ.

ಪಿಸಿಬಿಯ ಆಡಳಿತ ಮಂಡಳಿಯ ಸಭೆಯಲ್ಲಿ ಮಾತನಾಡಿದ ನಖ್ವಿ, 2024-25ರ ಹಣಕಾಸು ವರ್ಷದ ವಾರ್ಷಿಕ ಲೆಕ್ಕಪರಿಶೋಧಿತ ಹಣಕಾಸು ವರದಿಗೆ ಮಂಡಳಿ ಅಧಿಕೃತ ಅನುಮೋದನೆ ನೀಡಿದೆ ಎಂದು ತಿಳಿಸಿದರು. ಇದೇ ವೇಳೆ ಪಿಎಸ್‌ಎಲ್‌ನ ಬೆಳವಣಿಗೆ ಕುರಿತು ಆಶಾವಾದ ವ್ಯಕ್ತಪಡಿಸಿದರು.

ಇದನ್ನೂ ಓದಿ:

ಪಾಕಿಸ್ತಾನ ಸೂಪರ್ ಲೀಗ್ ಈಗ ಹೂಡಿಕೆದಾರರಿಗೆ ಪ್ರಮುಖ ಆಕರ್ಷಣೆಯಾಗುತ್ತಿದೆ. ಲೀಗ್‌ಗೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ವೇದಿಕೆಯಾಗಲಿದೆ ಎಂದು ಅವರು ಹೇಳಿದರು.

ಪಿಎಸ್‌ಎಲ್ ವಿಶ್ವದ ನಂಬರ್ ಒನ್ ಟಿ20 ಲೀಗ್ ಆಗುವ ದಿನ ದೂರದಲ್ಲಿಲ್ಲ. ಲೀಗ್‌ನ ಹಾದಿ ಮತ್ತು ಅದರ ಬೆಳವಣಿಗೆಯ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ, ಎಂದು ನಖ್ವಿ ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !