ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯ ಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಜಾಗತಿಕವಾಗಿ ತೈಲ ಬಿಕ್ಕಟ್ಟು ಉದ್ಭವಿಸಿದ್ದು, ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ್ದ ಪರಿಣಾಮ ವಿವಿಧ ರಾಷ್ಟ್ರಗಳಲ್ಲಿ ಇಂಧನ ಕೊರತೆ ಹೆಚ್ಚಾಗುತ್ತಿದೆ . ಇದರ ಬೆನ್ನಲ್ಲೇ ನೇಪಾಳ ಸರಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ನೇಪಾಳ ಸರ್ಕಾರವು ದೇಶದಲ್ಲಿ ವಾರಕ್ಕೆ ಎರಡು ರಜಾದಿನಗಳನ್ನು ಘೋಷಿಸಿದ್ದು, ಶನಿವಾರ ಮತ್ತು ಭಾನುವಾರ ಸರ್ಕಾರಿ ಕಚೇರಿಗಳಿಗೆ ರಜೆಗಳನ್ನು ನೀಡುವ ಮೂಲಕ ದೇಶದಲ್ಲಿ ಪ್ರಸುತ್ತ ಇರುವ ಇಂಧನವನ್ನು ಉಳಿಸಲು ಮುಂದಾಗಿದೆ.
ಈ ಕುರಿತು ಮಾಹಿತಿ ನೀಡಿದ ಸರ್ಕಾರಿ ವಕ್ತಾರ ಸಸ್ಮಿತ್ ಪೋಖರೆಲ್, ಇಂಧನ ಉಳಿಸಲು ಸರ್ಕಾರಿ ಕಚೇರಿ ಸಹಿತ ಶಿಕ್ಷಣ ಸಂಸ್ಥೆಗಳು ಶನಿವಾರ ಮತ್ತು ಭಾನುವಾರದಂದು ಬಂದ್ ಆಗಲಿದೆ. ಇನ್ನು ಈ ರಾಜ ದಿನಗಳನ್ನು ಸರಿಪಡಿಸಲು ಇನ್ನು ಸರ್ಕಾರಿ ಕಚೇರಿಗಳ ಕೆಲಸದ ಸಮಯವನ್ನು ಬೆಳಗ್ಗೆ 9ರಿಂದ ಸಂಜೆ 5 ರವರೆಗೆ ಮುಂದುವರಿಸಲು ಸಚಿವ ಸಂಪುಟ ನಿರ್ಧರಿಸಿದೆ. ಇಲ್ಲಿಯವರೆಗೆ ನೇಪಾಳದಲ್ಲಿ ಸರ್ಕಾರಿ ಕಚೇರಿಗಳು ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ಕಾರ್ಯನಿರ್ವಹಿಸುತ್ತಿದ್ದವು.



