April 6, 2026
Monday, April 6, 2026
spot_img

ಮದುವೆ ಬಳಿಕ ಮೊದಲ ಬಾರಿ ತವರಿಗೆ ಬಂದ ರಶ್ಮಿಕಾ: ತಂದೆಯಿಂದ ಮಗಳಿಗೆ ಸಿಕ್ಕಿತು ಸ್ಪೆಷಲ್ ಗಿಫ್ಟ್!

ಹೊಸದಿಗಂತ ವರದಿ, ಮಡಿಕೇರಿ:

ನ್ಯಾಷನಲ್ ಕ್ರಶ್ ಖ್ಯಾತಿಯ, ಕೊಡಗು ಮೂಲದ ಬಹು ಬಾಷಾ ಚಲನಚಿತ್ರ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಅವರ ತಂದೆ ಮಂದಣ್ಣ ಅವರು ಕೋಟ್ಯಂತರ ಮೌಲ್ಯದ ಮನೆಯನ್ನು ಮದುವೆಯ ಉಡುಗೊರೆಯಾಗಿ ನೀಡಿದ್ದಾರೆ.

ಮೂಲತಃ ವೀರಾಜಪೇಟೆ ಸಮೀಪದ ಚೆಂಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಕ್ಲೂರು ಗ್ರಾಮದ ನಿವಾಸಿಯಾಗಿದ್ದು, ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಮಾಜಿ ಸದಸ್ಯರಾಗಿದ್ದ ಮುಂಡಚಾಡಿರ ಮದನ್ ಮಂದಣ್ಣ ಮತ್ತು ಪತ್ನಿ ಸುಮನ್ ಮಂದಣ್ಣ ಅವರ ಹೆಸರಿನಲ್ಲಿದ್ದ ವೀರಾಜಪೇಟೆಯ ಐಷಾರಾಮಿ ಮನೆಯನ್ನು ವೀರಾಜಪೇಟೆ ಉಪ ನೋಂದಣಿ ಕಚೇರಿಯಲ್ಲಿ ತಮ್ಮ ಮಗಳಾದ ರಶ್ಮಿಕಾ ಮಂದಣ್ಣ ಅವರ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡಲಾಯಿತು.

ಖ್ಯಾತ ತೆಲುಗು ಚಿತ್ರನಟ ವಿಜಯ್ ದೇವರಕೊಂಡ ಅವರನ್ನು ಇತ್ತೀಚಗೆ ರಶ್ಮಿಕಾ ವಿವಾಹವಾಗಿದ್ದು, ವಿವಾಹದ ಉಡುಗೊರೆಯಾಗಿ ಮನೆಯನ್ನು ನೀಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮಂದಣ್ಣ ಕುಟುಂಬದ ವಕೀಲೆ ಪಟ್ಟಡ ರೀನಾ ಪ್ರಕಾಶ್ ಅವರು ಈ ಸಂದರ್ಭ ಹಾಜರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !