August 30, 2026
Sunday, August 30, 2026
spot_img

GOOD NEWS | ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈ, ಅಬುಧಾಬಿಗೆ ವಿಮಾನ ಸಂಚಾರ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್:


ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈ ಮತ್ತು ಅಬುಧಾಬಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯು ಇಂದು ವಿಮಾನ ಸಂಚಾರವನ್ನು ಪುನರಾರಂಭಿಸಿದೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.


ಇದರ ಜೊತೆಗೆ, ಮಂಗಳೂರು ಮತ್ತು ಕುವೈತ್ ನಡುವೆ ಜಝೀರಾ ಏರ್‌ವೇಸ್ ಇದೇ ಏಪ್ರಿಲ್ 8ರಿಂದ ವಾರಕ್ಕೆ ಎರಡು ಬಾರಿ ವಿಮಾನ ಸಂಚಾರವನ್ನು ಆರಂಭಿಸಲಿದೆ. ಈ ವಿಮಾನಗಳು ಪ್ರತಿ ಬುಧವಾರ ಮತ್ತು ಭಾನುವಾರ ಸಂಚರಿಸಲಿವೆ. ವಿಶೇಷವೆಂದರೆ, ಈ ವಿಮಾನವು ಕುವೈತ್‌ನಿಂದ ದಮ್ಮಾಮ್ ಮೂಲಕ ಮಂಗಳೂರಿಗೆ ಆಗಮಿಸಲಿದೆ. ಈ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರು ದಮ್ಮಾಮ್‌ನಲ್ಲಿ ಸೌದಿ ಅರೇಬಿಯಾದ ಗಡಿ ಭದ್ರತಾ ಪರಿಶೀಲನೆಗೆ ಒಳಗಾಗಲಿದ್ದಾರೆ ಎಂದು ವಿಮಾನ ನಿಲ್ದಾಣದ ಮೂಲಗಳು ಸ್ಪಷ್ಟಪಡಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !