April 10, 2026
Friday, April 10, 2026
spot_img

ಬಂಗಾಳ ಗೆಲುವಿಗೆ ಬಿಜೆಪಿ ‘ಮೆಗಾ ಪ್ರಣಾಳಿಕೆ’: 15 ಭರವಸೆಗಳ ಘೋಷಣೆ ಮಾಡಿದ ‘ನಮೋ ಟೀಮ್’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ತನ್ನ ಮಹತ್ವಾಕಾಂಕ್ಷಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಮಹಿಳೆಯರು, ಯುವಕರು, ಸರ್ಕಾರಿ ನೌಕರರು ಹಾಗೂ ರೈತರಿಗೆ ಹಲವು ದೊಡ್ಡ ಭರವಸೆಗಳನ್ನು ಘೋಷಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಕೋಲ್ಕತ್ತಾದಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಒಟ್ಟು 15 ಪ್ರಮುಖ ಆಶ್ವಾಸನೆಗಳನ್ನು ಜನರ ಮುಂದೆ ಇಟ್ಟಿದ್ದಾರೆ.

ಪ್ರಮುಖ ಪ್ರಣಾಳಿಕೆ ಹೀಗಿದೆ

  • ಮಹಿಳೆಯರಿಗೆ ಪ್ರತಿ ತಿಂಗಳು ₹3,000 ಆರ್ಥಿಕ ನೆರವು
  • ನಿರುದ್ಯೋಗಿ ಯುವಕರಿಗೆ ತಿಂಗಳಿಗೆ ₹3,000 ಭತ್ಯೆ
  • ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ
  • ಆಯುಷ್ಮಾನ್ ಭಾರತ್ ವಿಸ್ತರಣೆ, ಮಹಿಳೆಯರಿಗೆ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು HPV ಲಸಿಕೆ
  • 45 ದಿನಗಳೊಳಗೆ 7ನೇ ವೇತನ ಆಯೋಗ ಜಾರಿ
  • ಮುಂದಿನ 5 ವರ್ಷಗಳಲ್ಲಿ 1 ಕೋಟಿ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶ
  • 6 ತಿಂಗಳೊಳಗೆ ಏಕರೂಪ ನಾಗರಿಕ ಸಂಹಿತೆ (UCC) ಜಾರಿ
  • ಅಕ್ರಮ ನುಸುಳುವಿಕೆ ಪತ್ತೆ, ಡಿಲೀಟ್ ಮತ್ತು ಗಡಿಪಾರು ನೀತಿ
  • ‘ಸಿಂಡಿಕೇಟ್’ ಮತ್ತು ‘ಕಟ್ ಮನಿ’ ಸಂಸ್ಕೃತಿ ನಿರ್ಮೂಲನೆ
  • ಕಳೆದ 15 ವರ್ಷಗಳ ಭ್ರಷ್ಟಾಚಾರ ಮತ್ತು ಅಪರಾಧ ಪ್ರಕರಣಗಳ ಮರುತನಿಖೆ
  • ಟಿಎಂಸಿ ಆಡಳಿತದ ಅವಧಿ ಕುರಿತು ಶ್ವೇತಪತ್ರ ಬಿಡುಗಡೆ
  • ಕುರ್ಮಾಲಿ ಮತ್ತು ರಾಜ್‌ಬೋಂಗ್‌ಶಿ ಭಾಷೆಗಳನ್ನು ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆ
  • ಉತ್ತರ ಬಂಗಾಳದಲ್ಲಿ ಹೊಸ AIIMS, IIT ಮತ್ತು IIM ಸ್ಥಾಪನೆ
  • ಸಿಂಗೂರಿನಲ್ಲಿ ಬೃಹತ್ ಕೈಗಾರಿಕಾ ಪಾರ್ಕ್ ನಿರ್ಮಾಣ
  • ರೈತರು ಮತ್ತು ಮೀನುಗಾರರಿಗೆ ವಿಶೇಷ ಬೆಂಬಲ ಯೋಜನೆ, ಬಂಗಾಳವನ್ನು ಮೀನು ರಫ್ತು ಹಬ್ ಆಗಿ ಅಭಿವೃದ್ಧಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !