April 10, 2026
Friday, April 10, 2026
spot_img

ಎಲ್‌ಪಿಜಿಗೆ ಠಕ್ಕರ್ ಕೊಡಲು ಬಂತು ಹೊಸ ಆವಿಷ್ಕಾರ: ವಿದ್ಯುತ್ ಸ್ಟೌ ಪರಿಚಯಿಸಿದ ಕೇಂದ್ರ ಸಚಿವ ಜೋಶಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಜಾಗತಿಕ ಮಟ್ಟದಲ್ಲಿ ಇಂಧನ ಪೂರೈಕೆಯಲ್ಲಿ ಅಡೆತಡೆಗಳು ಉಂಟಾಗಿದ್ದು, ಭಾರತದಲ್ಲೂ ಅಲ್ಪ ಮಟ್ಟಿಗೆ ಎಲ್‌ಪಿಜಿ ಪೂರೈಕೆಯಲ್ಲಿ ಸಮಸ್ಯೆ ಎದುರಾಗಿದ್ದು, ಇದರ ನಡುವೆ ದೇಶಿಯ ಹೊಸ ತಂತ್ರಜ್ಞಾನದ ಆವಿಷ್ಕಾರವನ್ನು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಅವರು ಜನತೆ ಮುಂದೆ ತೆರೆದಿಟ್ಟಿದ್ದಾರೆ.

ಎಲ್‌ಪಿಜಿಗೆ ಪರ್ಯಾಯವಾಗಿ ಹೊಸತನವನ್ನು ಜನರು ಹುಡುಕಾಟ ನಡೆಸುತ್ತಿರುವ ಸಮಯದಲ್ಲಿ ಗ್ಯಾಸ್ ಸ್ಟೌ ಮಾದರಿಯಲ್ಲೇ ಜ್ವಾಲೆ ಹರಡುವ ‘ವಿದ್ಯುತ್ ಸ್ಟೌ’ ಅನ್ನು ಪರಿಚಯಿಸಿದ್ದಾರೆ.

ಗ್ಯಾಸ್ ಸ್ಟೌ ರೀತಿಯೇ ಜ್ವಾಲೆ ಹರಡುವ ಈ ವಿದ್ಯುತ್ ಸ್ಟೌ ಅಡುಗೆ ಅನಿಲದ ಕೊರತೆ ನೀಗಿಸುವ ಆಶಾಭಾವನೆ ಮೂಡಿಸಿದೆ. ಗ್ಯಾಸ್ ಗಳಿಗೆ ಅವಲಂಬಿತವಾಗಿರುವ ಹೊಟೇಲ್ , ಬೇಕರಿ ಮುಂತಾದ ಆಹಾರೋದ್ಯಮಿಗಳಿಗೆ ಒಂದು ಪರ್ಯಾಯ ಒಲೆಯಾಗಿದ್ದು, ಎಲ್‌ಪಿಜಿ ಬಳಸದೆ ಜ್ವಾಲೆಯನ್ನು ಉತ್ಪಾದಿಸುವ ಈ ಸ್ಟೌವ್ ದೇಶದಲ್ಲಿ ಮತ್ತಷ್ಟು ತಯಾರಾದರೆ ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಸಾಕಾರಕ್ಕೆ ಮತ್ತೊಂದು ಗರಿ ಎಂದು ಜೋಶಿ ಹೇಳಿದ್ದಾರೆ.

ಏನಿದರ ವಿಶೇಷತೆ?
ವಿದ್ಯುತ್ ಚಾಲಿತ ಈ ಸ್ಟೌವ್ ಗ್ಯಾಸ್ ಒಲೆಯಂತೆಯೇ ಜ್ವಾಲೆ ಉತ್ಪಾದನೆ ಆಗುತ್ತೆ. ಜೊತೆಗೆ ಹೆಚ್ಚು ಶಾಖವೂ ಇದೆ. ಜೊತೆಗೆ ಕಾರ್ಬನ್ ಸಹ ಹೊರ ಸೂಸುವುದಿಲ್ಲ. ಇದನ್ನು ಕಂಡು ನಾನು ಪ್ರಭಾವಿತನಾಗಿದ್ದೇನೆ. ಭಾರತೀಯ ತಯಾರಕರು ಈ ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಎಲ್‌ಪಿಜಿ ಮುಕ್ತವಾಗಿ ವಿದ್ಯುತ್ ಜ್ವಾಲೆ ಹರಡುವ ನೂತನ ಒಲೆಯನ್ನು ಹೆಚ್ಚಿನ ಪ್ರಮಾಣದಲ್ಲಿ ದೇಶದೊಳಗೆ ಉತ್ಪಾದಿಸಬೇಕೆಂದು ಎಂದು ಜೋಶಿ ಕರೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !