June 16, 2026
Tuesday, June 16, 2026
spot_img

Viral | ನಿದ್ದೆಯಲ್ಲೂ ಮೊಬೈಲ್ ಸ್ಕ್ರೋಲ್ ಮಾಡಿದ ಬಾಲಕಿ: ವಿಡಿಯೋ ನೋಡಿ ನೆಟ್ಟಿಗರ ನಿದ್ದೆ ಹಾರಿಹೋಯಿತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ 12 ಸೆಕೆಂಡಿನ ಒಂದು ವಿಡಿಯೋ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ನಿದ್ದೆಯಲ್ಲಿದ್ದ ಪುಟ್ಟ ಹುಡುಗಿಯೊಬ್ಬಳು ಕೈಯಲ್ಲಿ ಮೊಬೈಲ್ ಹಿಡಿದು ರೀಲ್ಸ್ ಸ್ಕ್ರೋಲ್ ಮಾಡುತ್ತಿರುವ ದೃಶ್ಯ ನೆಟ್ಟಿಗರ ಗಮನ ಸೆಳೆದಿದ್ದು, ಮಕ್ಕಳಲ್ಲಿ ಹೆಚ್ಚುತ್ತಿರುವ ಫೋನ್ ವ್ಯಸನದ ಬಗ್ಗೆ ಆತಂಕ ಮೂಡಿಸಿದೆ.

ವಿಡಿಯೋದಲ್ಲಿ ಮಗು ಗಾಢ ನಿದ್ರೆಯಲ್ಲಿ ಮಲಗಿರುವಂತೆ ಕಾಣುತ್ತದೆ. ಕಣ್ಣುಗಳು ಸಂಪೂರ್ಣ ಮುಚ್ಚಿಕೊಂಡಿದ್ದರೂ, ಅವಳ ಕೈಯಲ್ಲಿರುವ ಮೊಬೈಲ್ ಪರದೆಯ ಮೇಲೆ ಬೆರಳು ನಿಧಾನವಾಗಿ ಚಲಿಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಎಚ್ಚರದಲ್ಲಿರುವಾಗ ಮಾಡುವಂತೆ, ಅವಳು ಫೋನ್ ಸ್ಕ್ರೀನ್ ಮತ್ತೆ ಮತ್ತೆ ಸ್ವೈಪ್ ಮಾಡುತ್ತಿರುವ ದೃಶ್ಯ ಅಚ್ಚರಿಗೊಳಿಸಿದೆ.

ಇದನ್ನೂ ಓದಿ:

ಈ ಕ್ಲಿಪ್ ಸಾಮಾಜಿಕ ಜಾಲತಾಣ X ನಲ್ಲಿ ಶೇರ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಬಹುತೇಕ ನೆಟ್ಟಿಗರು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮೊಬೈಲ್ ನೀಡುತ್ತಿರುವ ಪೋಷಕರನ್ನೇ ಹೊಣೆ ಮಾಡಿದ್ದಾರೆ. ಇದು ಮಕ್ಕಳ ಅಭ್ಯಾಸವಲ್ಲ, ಪೋಷಕರ ನಿರ್ಲಕ್ಷ್ಯ, ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವರು, ಇದು ಕೇವಲ ಒಂದು ವಿಡಿಯೋ ಅಲ್ಲ, ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಎಚ್ಚರಿಕೆ, ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !