April 11, 2026
Saturday, April 11, 2026
spot_img

ಚೀನಾದಿಂದ ಇರಾನ್‌ಗೆ ಹೊಸ ವೆಪನ್ಸ್?: ಮಂಡೆಬಿಸಿ ಮಾಡ್ಕೊಂಡ ಅಮೆರಿಕ; ಮುಂದೆ ಕಥೆ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದ ಉದ್ವಿಗ್ನತೆಯ ನಡುವೆಯೇ ಹೊಸ ಬೆಳವಣಿಗೆಯೊಂದು ಅಮೆರಿಕದಲ್ಲಿ ಆತಂಕಕ್ಕೆ ಕಾರಣವಾಗಿದೆ. ಮುಂದಿನ ಕೆಲ ವಾರಗಳಲ್ಲಿ ಚೀನಾ ಇರಾನ್‌ಗೆ ನೂತನ ವಾಯು ರಕ್ಷಣಾ ಶಸ್ತ್ರಾಸ್ತ್ರಗಳನ್ನು ಪೂರೈಸುವ ಸಾಧ್ಯತೆ ಇದೆ ಎಂಬ ಮಾಹಿತಿ ಅಮೆರಿಕದ ಗುಪ್ತಚರ ಇಲಾಖೆಯಿಂದ ಹೊರಬಿದ್ದಿದೆ. ಈ ಸುದ್ದಿ ಇದೀಗ ಅಂತಾರಾಷ್ಟ್ರೀಯ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಗುಪ್ತಚರ ವರದಿಗಳ ಪ್ರಕಾರ, ಚೀನಾ MANPADS ಎಂದು ಕರೆಯಲಾಗುವ ಭುಜದ ಮೇಲೆ ಹೊತ್ತು ಪ್ರಯೋಗಿಸಬಹುದಾದ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಇರಾನ್‌ಗೆ ಕಳುಹಿಸಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ. ಈ ಶಸ್ತ್ರಾಸ್ತ್ರಗಳನ್ನು ನೇರವಾಗಿ ಕಳುಹಿಸದೆ, ಬೇರೆ ದೇಶಗಳ ಮೂಲಕ ಸಾಗಿಸಿ ಮೂಲವನ್ನು ಮರೆಮಾಚುವ ಪ್ರಯತ್ನ ನಡೆಯಬಹುದೆಂಬ ಅನುಮಾನವೂ ವ್ಯಕ್ತವಾಗಿದೆ.

ಇದನ್ನೂ ಓದಿ:

ಇತ್ತೀಚಿನ ಅಮೆರಿಕ-ಇರಾನ್ ಸಂಘರ್ಷದಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳು ಪ್ರಮುಖ ಪಾತ್ರ ವಹಿಸಿದ್ದವು. ಇಂತಹ ಹೊಸ ಪೂರೈಕೆ ನಡೆದರೆ, ಅಮೆರಿಕದ ಯುದ್ಧ ವಿಮಾನಗಳ ಕಾರ್ಯಾಚರಣೆಗೆ ಸವಾಲು ಎದುರಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿಶೇಷವಾಗಿ ಕಡಿಮೆ ಎತ್ತರದಲ್ಲಿ ಹಾರುವ ವಿಮಾನಗಳಿಗೆ ಈ ವ್ಯವಸ್ಥೆಗಳು ಅಪಾಯಕಾರಿಯಾಗಿರಬಹುದು ಎನ್ನಲಾಗಿದೆ.

ಇನ್ನೊಂದೆಡೆ, ವಾಷಿಂಗ್ಟನ್‌ನಲ್ಲಿರುವ ಚೀನೀ ರಾಯಭಾರ ಕಚೇರಿ ಈ ಆರೋಪಗಳನ್ನು ತಳ್ಳಿಹಾಕಿದ್ದು, ಸಂಘರ್ಷದಲ್ಲಿರುವ ಯಾವುದೇ ದೇಶಕ್ಕೂ ಚೀನಾ ಶಸ್ತ್ರಾಸ್ತ್ರ ಪೂರೈಸಿಲ್ಲ ಎಂದು ಸ್ಪಷ್ಟಪಡಿಸಿದೆ. ಆಧಾರರಹಿತ ಆರೋಪಗಳನ್ನು ಮಾಡಬಾರದು ಎಂದು ಪ್ರತಿಕ್ರಿಯೆ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !