September 16, 2026
Wednesday, September 16, 2026
spot_img

ಪ್ರಿಯಾಂಶ್, ಅಯ್ಯರ್ ಆರ್ಭಟಕ್ಕೆ ನೆಲಕಚ್ಚಿದ ಹೈದರಾಬಾದ್: ಪಂಜಾಬ್ ಗೆ ರೋಚಕ ಗೆಲುವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಿಯಾಂಶ್ ಆರ್ಯ, ನಾಯಕ ಶ್ರೇಯಸ್ ಅಯ್ಯರ್ ಭರ್ಜರಿ ಆಟಕ್ಕೆ ಸನ್‌ರೈಸರ್ಸ್ ಹೈದರಾಬಾದ್ ಬೌಲರ್ಸ್ ಗಳು ದೂಳೀಪಟವಾಗಿದ್ದು,ಪಂಜಾಬ್ ಕಿಂಗ್ಸ್ ಭರ್ಜರಿ ಗೆಲುವು ಸಾಧಿಸಿದೆ.

ಹೈದರಾಬಾದ್ ನೀಡಿದ್ದ 220 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ್ದ ಪಂಜಾಬ್ ಕಿಂಗ್ಸ್ ಉತ್ತಮ ಆರಂಭ ಪಡೆದುಗೊಂಡಿತು. ಭಸಿಮ್ರನ್ ಸಿಂಗ್ ಹಾಗೂ ಪ್ರಿಯಾಂಶ್ ಆರ್ಯ ಪವರ್ ಪ್ಲೇನಲ್ಲೇ ಸಿಕ್ಸರ್, ಫೋರ್ ಗಳ ಸುರಿಮಳೆ ಹರಿಸಿದರು. ಪ್ರಿಯಾಂಶ್ ಆರ್ಯ 57 ರನ್‌ಗಳಿಸಿ ಔಟಾದರು. ಇದರ ಬೆನ್ನಲ್ಲೇ ಪ್ರಭಸಿಮ್ರನ್ ಕೂಡ 51 ರನ್‌ಗಳಿಸಿ ಪೆವಿಲಿಯನ್ ನತ್ತ ಮುಖಮಾಡಿದರು. ಕೂಪರ್ ಕೊನೊಲಿ 11 ರನ್‌ಗಳಿಸಿ ನಿರಾಸೆ ಮೂಡಿಸಿದರು.

ಬಳಿಕ ತಂಡಕ್ಕೆ ಬಲ ತುಂಬಿದ ನಾಯಕ ಶ್ರೇಯಸ್ ಅಯ್ಯರ್ ನೆಹಾಲ್ ವಧೇರಾ ಜೊತೆಗೂಡಿ ಭರ್ಜರಿ ಬ್ಯಾಟಿಂಗ್ ನಡೆಸಿದರು. ಆದರೆ ನೆಹಾಲ್ 14 ರನ್‌ಗಳಿಸಿ ಔಟಾದರು. ಬಳಿಕ ಶಶಾಂಕ್ ಸಿಂಗ್ ಜೊತೆಗೂಡಿ ಅಯ್ಯರ್ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಅಯ್ಯರ್ ಅಜೇಯ 69 ರನ್‌ಗಳಿಸಿದರೆ, ಶಶಾಂಕ್ ಅಜೇಯ 16 ರನ್‌ಗಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !