April 11, 2026
Saturday, April 11, 2026
spot_img

ಬಿಡುಗಡೆಗೂ ಮುನ್ನವೇ ‘ಜನ ನಾಯಗನ್’ ಸೋರಿಕೆ: ಥಿಯೇಟರ್‌ನಲ್ಲೇ ಸಿನಿಮಾ ನೋಡೋಣ ಎಂದ ಪೂಜಾ ಹೆಗ್ಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ನಟ ವಿಜಯ್ ನಟನೆಯ ಜನ ನಾಯಗನ್’ ಸಿನಿಮಾ ಬಿಡುಗಡೆ ಮುನ್ನವೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ .ಇದರ ಬೆನ್ನಲ್ಲೇ ಚಿತ್ರದ ನಾಯಕಿ ಪೂಜಾ ಹೆಗ್ಡೆ ಕೂಡ ಸಿನಿಮಾ ಸೋರಿಕೆ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಜೊತೆಗೆ ಸಿನಿಮಾವನ್ನು ಚಿತ್ರಮಂದಿರಗಳಲ್ಲೇ ನೋಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರ ಹಾಕಿದ ಅವರು, ಈ ಘಟನೆಯಿಂದ ಮನಸ್ಸಿಗೆ ನೋವುಂಟಾಗಿದೆ. ಸಿನಿಮಾ ಮಾಡುವುದು ಅಂದರೆ ಅಲ್ಲಿ ಕಷ್ಟ, ತ್ಯಾಗ, ಶ್ರಮಗಳಿರುತ್ತದೆ. ಅದೆಷ್ಟೋ ಸವಾಲುಗಳನ್ನು ಎದುರಿಸಿದ ಫಲ ಸಿನಿಮಾ. ಆದರೆ ಇದೀಗ ಸಿನಿಮಾ ಸೋರಿಕೆ ವಿಚಾರ ತಿಳಿದು ತುಂಬಾ ಬೇಸರವಾಗುತ್ತದೆ. ಇದಕ್ಕಾಗಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ನೋವು ಕೊಡುತ್ತೆ ಎಂದು ಅವರು ಹೇಳಿದ್ದಾರೆ.

ಇಂದು ಪೈರಸಿಯಿಂದಾಗಿ ಕಷ್ಟಪಟ್ಟ ಪ್ರತಿಯೊಬ್ಬ ಕಲಾವಿದ ಮತ್ತು ತಂತ್ರಜ್ಞನಿಗೆ ಸಿಗಬೇಕಾದ ಗೌರವ ಸಿಗುವುದಿಲ್ಲ . ಜೊತೆಗೆ ಇದು ವಿಜಯ್ ಸರ್ ಅವರ ಕೊನೆಯ ಸಿನಿಮಾ. ನಾವು ಎಲ್ಲರೂ ಒಟ್ಟಾಗಿ ದೊಡ್ಡ ಪರದೆಯ ಮೇಲೆ ಸರಿಯಾದ ರೀತಿಯಲ್ಲಿ ಸಂಭ್ರಮಿಸಬೇಕು ಹಾಗಾಗಿ, ಸ್ವಲ್ಪ ಕಾಯೋಣ. ಸಿನಿಮಾ ಸರಿಯಾದ ಸಮಯಕ್ಕೆ ಬಿಡುಗಡೆಯಾಗಲಿದೆ. ಪೈರಸಿಗೆ ಬೆಂಬಲಿಸಬೇಡಿ ಎಂದು ಮನವಿ ಮಾಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !