April 11, 2026
Saturday, April 11, 2026
spot_img

ಅಲ್ಲು ಅರ್ಜುನ್ ಲುಕ್ ಗೆ ಶಾರುಖ್ ಬೌಲ್ಡ್: ‘ರಾಕಾ’ ಸಿನಿಮಾ ‘ಮಾಸ್ ಮಾಸ್ ಮಾಸ್’ ಎಂದ ಬಾದ್ ಶಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಲಿವುಡ್ ನಿರ್ದೇಶಕ ಅಟ್ಲಿ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ನಾಯಕನಾಗಿ ನಟಿಸಲಿರುವ ‘ರಾಕಾ’ ಸಿನಿಮಾದ ಪೋಸ್ಟರ್ ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಕೂಡ ಪೋಸ್ಟರ್ ಕಂಡು ಫಿದಾ ಆಗಿದ್ದಾರೆ .

ಅಲ್ಲು ಅರ್ಜುನ್ ಅವರ ಲುಕ್ ಕಂಡು ಇಂಟರೆಸ್ಟಿಂಗ್ ಮತ್ತು ಅದ್ಭುತವಾಗಿದೆ ಎಂದ ಖಾನ್ , ಸಿನಿಮಾ ‘ಮಾಸ್ ಮಾಸ್ ಮಾಸ್’ ಆಗಿರಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪೋಸ್ಟ್ ಮಾಡಿರುವ ಖಾನ್, ಹ್ಯಾಪಿ ಬರ್ತ್‌ಡೇ ಅಲ್ಲು ಅರ್ಜುನ್, ನೀವು ಹೇಗಿದ್ದೀರೋ ಹಾಗೆಯೇ ಈ ಪೋಸ್ಟರ್ ಕೂಡ ಇಂಟರೆಸ್ಟಿಂಗ್ ಮತ್ತು ಅದ್ಭುತವಾಗಿದೆ. ನೀವೆಲ್ಲರೂ ಸೇರಿ ಏನು ಮಾಡಿದ್ದೀರಿ ಎಂದು ನೋಡಲು ಕಾಯುತ್ತಿದ್ದೇನೆ. ಅಟ್ಲಿ ಅವರ ಮಾತಿನಲ್ಲಿ ಹೇಳುವುದಾದರೆ ಮಾಸ್ ಮಾಸ್ ಮಾಸ್ ಆಗಿರಲಿದೆ. ತುಂಬಾ ರೋಚಕವಾಗಿ ಕಾಣುತ್ತಿದೆ, ಆಲ್ ದಿ ಬೆಸ್ಟ್ ಎಂದು ಬರೆದುಕೊಂಡಿದ್ದಾರೆ.

ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ದಿನವಾದ ಏಪ್ರಿಲ್ 8 ರಂದು ‘ರಾಕಾ’ ಚಿತ್ರತಂಡ ಸಿನಿಮಾದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿತ್ತು.

ಶಾರುಖ್ ಖಾನ್ ಈ ಹಿಂದೆ ಅಟ್ಲಿ ಅವರ ಜೊತೆ ‘ಜವಾನ್’ ಸಿನಿಮಾದಲ್ಲಿ ಕೆಲಸ ಮಾಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !