ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಕದನನಕ್ಕೆ ಪೂರ್ಣ ವಿರಾಮ ನೀಡಲು ಅಮೆರಿಕ -ಇರಾನ್ ಪಾಕಿಸ್ತಾನದಲ್ಲಿ ಶಾಂತಿ ಮಾತುಕತೆ ನಡೆಸುತ್ತಿದ್ದರೆ , ಇತ್ತ ಇಸ್ರೇಲ್, ಲೆಬನಾನ್ ಮೇಲೆ ದಾಳಿ ಮುಂದುವರಿಸಿರುವುದಾಗಿ ಗುಡುಗಿದೆ.
ಈ ಕುರಿತು ಮಾಹಿತಿ ನೀಡಿದ ಇಸ್ರೇಲ್ ಸೇನೆ, ಕಳೆದ 24 ಗಂಟೆಗಳಲ್ಲಿ ಲೆಬನಾನ್‌ನಲ್ಲಿರುವ ಇರಾನ್ ಬೆಂಬಲಿತ ಉಗ್ರಗಾಮಿ ಗುಂಪಿನ ಮೂಲಸೌಕರ್ಯವನ್ನು ಹೊಡೆದುರುಳಿಸಿದೆ ಎಂದು ತಿಳಿಸಿದೆ.
ಇತ್ತ ಯುಎಸ್ ನಡುವಿನ ಮಾತುಕತೆಯಲ್ಲಿ ಹೆಜ್ಬೊಲ್ಲಾ ಮೇಲೆ ಇಸ್ರೇಲಿ ದಾಳಿಗಳನ್ನು ನಿಲ್ಲಿಸಲು ಟೆಹ್ರಾನ್ ಒತ್ತಾಯಿಸುತ್ತಿದ್ದಂತೆ ಈ ಹೇಳಿಕೆ ಬಂದಿದೆ.
ದಕ್ಷಿಣ ಲೆಬನಾನ್‌ನ ಮೇಲೆ ಇಸ್ರೇಲ್ ಸೇನೆಯಿಂದ ನಿರಂತರ ಡ್ರೋನ್ ಮತ್ತು ರಾಕೆಟ್ ಗಳ ದಾಳಿ ನಡೆಯುತ್ತಲ್ಲೇ ಇದ್ದು, ಕನಿಷ್ಠ ಮೂರು ಜನರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.



