ಹೊಸದಿಗಂತ ಡಿಜಿಟಲ್ ಡೆಸ್ಕ್ :
ಮಧ್ಯಪ್ರಾಚ್ಯದಲ್ಲಿನ ಸಂಘರ್ಷಕ್ಕೆ ಅಲ್ಪ ವಿರಾಮ ಘೋಷಣೆಯಾದರೂ ಕೂಡ ಇಸ್ರೇಲ್ ಮಾತ್ರ ಲೆಬನಾನ್ ಮೇಲೆ ತನ್ನ ದಾಳಿಯನ್ನು ಮುಂದುವರಿಸಿದ್ದು, ದಕ್ಷಿಣ ಲೆಬನಾನ್‌ನಲ್ಲಿರುವ ಸಂಪೂರ್ಣ ಹಳ್ಳಿಯೇ ಸುಟ್ಟು ಭಸ್ಮವಾಗಿದೆ.
ಈ ಕುರಿತು ಮಾಧ್ಯಮಗಳು ವರದಿ ಮಾಡಿದ್ದು, ಗಾಜಾದ ರಫಾ ಮತ್ತು ಬೀಟ್ ಹನೌನ್‌ನಲ್ಲಿ ಬಳಸಿದ ವಿಧಾನವನ್ನು ಆಧರಿಸಿ ಗಡಿ ಗ್ರಾಮಗಳಲ್ಲಿರುವ ಎಲ್ಲಾ ಮನೆಗಳನ್ನು ನಾಶಮಾಡಲು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಕರೆ ನೀಡಿದ್ದು, ಇದರ ಬೆನ್ನಲ್ಲೇ ದಕ್ಷಿಣ ಲೆಬನಾನ್‌ನಲ್ಲಿರುವ ತೈಬೆಹ್, ನಕೌರಾ ಮತ್ತು ಡೀರ್ ಸೆರಿಯನ್ ಹಳ್ಳಿಗಳನ್ನು ಗುರಿಯಾಗಿಸಿ ದಾಳಿ ನಡೆಸಿ ಸಂಪೂರ್ಣ ನಾಶ ಗೊಳಿಸಿದೆ ಸಾವು ನೋವಿನ ಬಗ್ಗೆ ವರದಿಗಳು ತಿಳಿದುಬಂದಿಲ್ಲ.
ಇತ್ತ ಇಸ್ರೇಲ್ ನ ಭೀಕರ ದಾಳಿಗೆ ಲೆಬನಾನ್‌ನಲ್ಲಿ ಒಟ್ಟು ಸಾವಿನ ಸಂಖ್ಯೆ 2,000 ಕ್ಕಿಂತ ಹೆಚ್ಚಾಗಿದ್ದು, ಜನರಲ್ಲಿ ಭಯ ಹುಟ್ಟಿಸಿದೆ. ಆದರೆ ಈ ದಾಳಿಯ ಕುರಿತು ಲೆಬನಾನ್ ಸರ್ಕಾರವಾಗಲೀ ಅಥವಾ ಇಸ್ರೇಲ್ ಸರ್ಕಾರವಾಗಲೀ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.



