September 14, 2026
Monday, September 14, 2026
spot_img

ಇನ್ಮುಂದೆ ಹೊಟೇಲ್‌ಗಳಲ್ಲಿ ಹೆಚ್ಚು ಹಣ ಕೊಟ್ರೂ ಗಂಟೆಗಟ್ಟಲೆ ಕಾದು ಕೂರಬೇಕು, ಯಾಕೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೊಟೇಲ್‌ಗಳಿಗೆ ತಿಂಡಿ-ಊಟಕ್ಕೆ ಹೋಗೋರು ಹೆಚ್ಚು ಬಿಲ್‌ ಕೊಡೋದ್ರ ಜೊತೆಗೆ ತಿನ್ನೋಕೂ ಹೆಚ್ಚು ಸಮಯ ಕಾಯಬೇಕಿದೆ.

ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್‌ನಿಂದಾಗಿ ಈಗಾಗಲೇ ರಾಜ್ಯದ ಹೊಟೇಲ್‌ ಉದ್ಯಮಕ್ಕೆ ಹೊಡೆತ ಬಿದ್ದಿದೆ. ಗ್ಯಾಸ್‌ ಸ್ಟೋವ್‌ ಬಳಸುವುದಕ್ಕೆ ಸಿಲಿಂಡರ್‌ ಲಭ್ಯವಾಗದೇ ಸಮಸ್ಯೆಯಾಗಿದೆ.

ಆದರೂ ಹೊಟೇಲ್‌ ಮುಚ್ಚಲು ಒಪ್ಪದ ಸಿಬ್ಬಂದಿ ಸೌದೆ ಒಲೆ ಹಾಗೂ ಎಲೆಕ್ಟ್ರಿಕ್‌ ಸ್ಟೋವ್‌ನ ಮೊರೆ ಹೋಗಿದ್ದಾರೆ. ಇದರಿಂದಾಗಿಯೇ ವೇಟಿಂಗ್‌ ಸಮಯ ಹೆಚ್ಚಾಗಲಿದೆ.

ಗ್ಯಾಸ್‌ ಸ್ಟೋವ್‌ಗೆ ಕಂಪೇರ್‌ ಮಾಡಿದರೆ ಸೌದೆ ಒಲೆ ಅಥವಾ ಕರೆಂಟ್‌ ಒಲೆಯಲ್ಲಿ ಅಡುಗೆ ಮಾಡಲು ಹೆಚ್ಚಿನ ಸಮಯ ಬೇಕಾಗುತ್ತದೆ. ಹೀಗಾಗಿ ಜನ ತಿಂಡಿಯನ್ನು ಆರ್ಡರ್‌ ಮಾಡಿದ ನಂತರ ಕನಿಷ್ಠ ಎಂದರೂ ಕಾಲು ಗಂಟೆ, ಇಪ್ಪತ್ತು ನಿಮಿಷ ಕಾಯಲೇಬೇಕಿದೆ.

ಊಟ ತಿಂಡಿ ಕೂಡ ದುಬಾರಿಯಾಗಿದೆ. ಇದರ ಜೊತೆಗೆಯೇ ವೇಟಿಂಗ್‌ ಟೈಮ್‌ ಕೂಡ ಹೆಚ್ಚಾಗಿದೆ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ನಾವು ಕೂಡ ನಿಮ್ಮಂತೆಯೇ ಅಸಹಾಯಕರು, ಕೆಲಸ ಜಾಸ್ತಿ, ಕಷ್ಟ ಜಾಸ್ತಿ ಹಾಗೂ ಬಿಲ್‌ ಕೂಡ ಜಾಸ್ತಿ ಎಂದು ಹೊಟೇಲ್‌ ಸಿಬ್ಬಂದಿ ಹೇಳ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !