April 13, 2026
Monday, April 13, 2026
spot_img

ಇರಾನ್ ಬರಲಿ ಬಿಡಲಿ ನನಗಿಲ್ಲ ಚಿಂತೆ, ಅಂತಿಮ ಗೆಲುವು ನಮ್ಮದೇ: ಟ್ರಂಪ್ ಗುಡುಗು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಆತಿಥ್ಯದಲ್ಲಿ ನಡೆದ ಬಹುನಿರೀಕ್ಷಿತ ಅಮೆರಿಕ-ಇರಾನ್ ಶಾಂತಿ ಮಾತುಕತೆಗಳು ಯಾವುದೇ ತೀರ್ಮಾನವಿಲ್ಲದೆ ಅಂತ್ಯಗೊಂಡಿವೆ. ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, “ಇರಾನ್ ಮಾತುಕತೆಗೆ ಮರಳುತ್ತದೆಯೋ ಇಲ್ಲವೋ ಎಂಬ ಬಗ್ಗೆ ನನಗೆ ಕಿಂಚಿತ್ತೂ ತಲೆನೋವಿಲ್ಲ” ಎಂದು ಗುಡುಗಿದ್ದಾರೆ.

ಫ್ಲೋರಿಡಾದಿಂದ ಹಿಂದಿರುಗಿದ ಬಳಿಕ ಜಂಟಿ ಬೇಸ್ ಆಂಡ್ರ್ಯೂಸ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, “ನನಗೆ ಅಮೆರಿಕದ ಹಿತಾಸಕ್ತಿಯೇ ಮೊದಲು. ಇರಾನ್ ಸಂಧಾನದ ಮೇಜಿಗೆ ಬರದಿದ್ದರೆ ನನಗೇನು ನಷ್ಟವಿಲ್ಲ. ಏನೇ ಆದರೂ ಅಂತಿಮವಾಗಿ ನಾವೇ ಗೆಲ್ಲುತ್ತೇವೆ” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಇಸ್ಲಾಮಾಬಾದ್‌ನಲ್ಲಿ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಇರಾನ್‌ನ ಮೊಹಮ್ಮದ್ ಬಘರ್ ಗಾಲಿಬಾಫ್ ನೇತೃತ್ವದ ತಂಡಗಳ ನಡುವೆ ಸತತ 21 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಯಿತು. ಆದರೆ, ಇರಾನ್ ಇನ್ನೂ ಪರಮಾಣು ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಆಸಕ್ತಿ ಹೊಂದಿರುವುದು ಈ ಮಾತುಕತೆಯಲ್ಲಿ ಸಾಬೀತಾಗಿದೆ ಎಂದು ಅಮೆರಿಕ ಆರೋಪಿಸಿದೆ. “ಯಾವುದೇ ಕಾರಣಕ್ಕೂ ಇರಾನ್ ಪರಮಾಣು ಅಸ್ತ್ರ ಹೊಂದುವುದಕ್ಕೆ ಬಿಡುವುದಿಲ್ಲ” ಎಂದು ಟ್ರಂಪ್ ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.

ಈ ರಾಜತಾಂತ್ರಿಕ ವೈಫಲ್ಯವು ಕೇವಲ ಎರಡು ದೇಶಗಳ ನಡುವಿನ ಸಮಸ್ಯೆಯಾಗಿ ಉಳಿದಿಲ್ಲ. ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟು ಮುಂದುವರಿದಿರುವುದು ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಭಾರಿ ಹೊಡೆತ ನೀಡುವ ಸಾಧ್ಯತೆಯಿದೆ. ಜಲಸಂಧಿ ತೆರೆದು ತೈಲ ಬೆಲೆ ಸ್ಥಿರವಾಗಬಹುದು ಎಂಬ ಭರವಸೆ ಈಗ ಮಸುಕಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !