April 15, 2026
Wednesday, April 15, 2026
spot_img

ಬರ್ತ್ ಡೇ ದಿನನೇ ಕೊನೆ ದಿನ ಆಗೋಯ್ತು: ಕ್ಯಾಲಿಫೋರ್ನಿಯಾದ ಜಲಪಾತದಲ್ಲಿ ಮುಳುಗಿ ಭಾರತೀಯ ಟೆಕ್ಕಿಯ ದುರ್ಮ*ರಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

26ನೇ ವರ್ಷದ ಹುಟ್ಟುಹಬ್ಬವನ್ನು ಸ್ನೇಹಿತರೊಂದಿಗೆ ಸಂಭ್ರಮದಿಂದ ಆಚರಿಸಲು ತೆರಳಿದ್ದ ಭಾರತೀಯ ಮೂಲದ ಯುವ ಟೆಕ್ಕಿಯೊಬ್ಬರು ಅಮೆರಿಕದಲ್ಲಿ ಜಲಪಾತದಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಆಂಧ್ರಪ್ರದೇಶ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಸಿಂಗಿರೆಡ್ಡಿ ಸಾಯಿ ಶ್ರೀಹರಿಕೃಷ್ಣ ಮೃತ ಟೆಕ್ಕಿ.

ಮಾಹಿತಿಯ ಪ್ರಕಾರ, ಶ್ರೀಹರಿಕೃಷ್ಣ ಅವರು ಕೆಲವು ತಿಂಗಳ ಹಿಂದಷ್ಟೇ ಅಮೆರಿಕದ ಸೇಂಟ್ ಲೂಯಿಸ್‌ನ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದ್ದರು. ಶನಿವಾರ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಸ್ನೇಹಿತರೊಂದಿಗೆ ಕ್ಯಾಲಿಫೋರ್ನಿಯಾದ ಪ್ರಸಿದ್ಧ ಜಲಪಾತ ಪ್ರದೇಶಕ್ಕೆ ತೆರಳಿದ್ದರು. ಈಜುವುದನ್ನು ತುಂಬಾ ಇಷ್ಟಪಡುವ ಅವರು ನೀರಿಗೆ ಇಳಿದ ಕೆಲವೇ ನಿಮಿಷಗಳಲ್ಲಿ ಪ್ರಬಲ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:

ಸ್ನೇಹಿತರು ತಕ್ಷಣ ರಕ್ಷಿಸಲು ಪ್ರಯತ್ನಿಸಿದರೂ, ನೀರಿನ ತೀವ್ರ ಸೆಳೆತದ ಕಾರಣ ಅವರಿಗೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ಬಳಿಕ ತುರ್ತು ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆದಿದೆ. ಅಧಿಕಾರಿಗಳು ಇದನ್ನು ಅಪಘಾತ ಎಂದು ಪರಿಗಣಿಸಿದ್ದು, ನೀರಿನ ಪರಿಸ್ಥಿತಿ ಅಪಾಯಕಾರಿಯಾಗಿತ್ತು ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !