June 15, 2026
Monday, June 15, 2026
spot_img

CINE | ಆಪರೇಷನ್‌ ಸಿಂದೂರಕ್ಕೆ ಇವರೇ ಹೀರೋ ಅಂತೆ! ಆದ್ರೆ ಸಿನಿಮಾ ಓಡೋದೇ ಡೌಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿವೇಕ್‌ ಅಗ್ನಿಹೋತ್ರಿ ಹೊಸ ಸಿನಿಮಾಕ್ಕೆ ಕೈ ಹಾಕಿದ್ದಾರೆ. ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದ ಆಪರೇಷನ್‌ ಸಿಂದೂರ ಬಗೆಗಿನ ಸಿನಿಮಾ ಇದಾಗಿದೆ.

ಈ ಸಿನಿಮಾಗೆ ಯಾರು ಹೀರೋ ಅನ್ನೋ ಕುತೂಹಲ ಎಲ್ಲ ಕಡೆ ಮನೆಮಾಡಿತ್ತು. ಆದರೆ ಈ ಸಿನಿಮಾ ಆಫರ್‌ ನಟ ವರುಣ್‌ ಧವನ್‌ಗೆ ಹೋಗಿದೆಯಂತೆ!

ಹೌದು, ದೇಶಭಕ್ತಿ ಸಿನಿಮಾಗಳ ಬಗ್ಗೆ ಜಾಸ್ತಿ ಒಲವು ತೋರುತ್ತಿರುವ ವರುಣ್‌ ಧವನ್‌ ಈ ಸಿನಿಮಾಗೆ ನಾಯಕನಾಗುವ ಸಾಧ್ಯತೆ ದಟ್ಟವಾಗಿದೆ. ಹಾಗೆಯೇ ವರುಣ್‌ ಧವನ್‌ ಹೀರೋ ಆದ್ರೆ ಸಿನಿಮಾ ಓಡೋದಿಲ್ಲ ಎಂದೂ ಜನ ಹೇಳ್ತಿದ್ದಾರೆ.

ವರುಣ್‌ ಧವನ್‌ ಇತ್ತೀಚೆಗೆ ತಮ್ಮ ಆಕ್ಟಿಂಗ್‌ನಿಂದಲೇ ಟ್ರೋಲ್‌ ಆಗ್ತಿದ್ದಾರೆ. ಇಂತವರಿಗೆ ಸೀರಿಯಸ್‌ ಸಿನಿಮಾ ಕೊಟ್ರೆ ಹೇಗಿರುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !