September 4, 2026
Friday, September 4, 2026
spot_img

CINE | ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಟೀಸರ್ ಔಟ್: AI ಬಳಸಿದ್ರೆ ಟ್ರೋಲರ್ಸ್ ಸುಮ್ನಿರ್ತಾರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನಲ್ಲಿ ಡೇವಿಡ್ ಧವನ್–ವರುಣ್ ಧವನ್ ಜೋಡಿಯ ಹೊಸ ಸಿನಿಮಾ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಟೀಸರ್ ಬಿಡುಗಡೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಫನ್ ಎಂಟರ್ಟೈನರ್ ಆಗಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ವರುಣ್ ಧವನ್ ಜೊತೆ ಪೂಜಾ ಹೆಗ್ಡೆ ಮತ್ತು ಮೃಣಾಲ್ ಠಾಕೂರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

ಟೀಸರ್ ಆರಂಭದಲ್ಲಿ ಇಬ್ಬರು ಮಕ್ಕಳು ತಮ್ಮ ತಾಯಂದಿರ ಬಗ್ಗೆ ಮಾತನಾಡುವ ದೃಶ್ಯ ಕಾಣಿಸುತ್ತದೆ. ಬಳಿಕ ಇಬ್ಬರಿಗೂ ತಂದೆ ಒಬ್ಬರೇ ಎಂಬ ಟ್ವಿಸ್ಟ್ ರಿವೀಲ್ ಆಗುತ್ತಿದ್ದು, ಇದೇ ದೃಶ್ಯ ಹೆಚ್ಚು ಗಮನ ಸೆಳೆದಿದೆ. ಆದರೆ ಈ ಭಾಗದಲ್ಲಿ AI ತಂತ್ರಜ್ಞಾನ ಬಳಸಿದ ಎಡಿಟಿಂಗ್ ವಿಚಿತ್ರವಾಗಿ ಕಾಣುತ್ತಿದೆ ಎಂದು ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಇತ್ತೀಚೆಗೆ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದ ವರುಣ್ ಧವನ್‌ಗೆ ಈ ಸಿನಿಮಾ ಬಹಳ ಮುಖ್ಯವಾಗಿದೆ. ಮೇ 20ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಚಿತ್ರದ ಭವಿಷ್ಯದ ಬಗ್ಗೆ ಈಗಾಗಲೇ ಕುತೂಹಲ ಹೆಚ್ಚಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !