August 17, 2026
Monday, August 17, 2026
spot_img

ಇರಾನ್​- ಅಮೆರಿಕ ವಾರ್ ಗೆ ‘ನಮೋ ಎಂಟ್ರಿ’: ಮೋದಿಗೆ ಕರೆ ಮಾಡಿ 40 ನಿಮಿಷ ಡೀಪ್ ಡಿಸ್ಕಶನ್ ನಡೆಸಿದ ಟ್ರಂಪ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ತೀವ್ರವಾಗಿರುವ ಈ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಮಹತ್ವದ ದೂರವಾಣಿ ಮಾತುಕತೆ ನಡೆದಿದೆ. ಸುಮಾರು 40 ನಿಮಿಷಗಳ ಕಾಲ ನಡೆದ ಈ ಸಂಭಾಷಣೆಯಲ್ಲಿ ಹಾರ್ಮುಜ್ ಜಲಸಂಧಿಯ ಭದ್ರತೆ ಮತ್ತು ಇರಾನ್ ಬಿಕ್ಕಟ್ಟು ಪ್ರಮುಖ ಚರ್ಚೆಯ ವಿಷಯವಾಗಿತ್ತು.

ಮೂಲಗಳ ಪ್ರಕಾರ, ಇಬ್ಬರು ನಾಯಕರು ಪಶ್ಚಿಮ ಏಷ್ಯಾದ ಸಂಘರ್ಷದಿಂದ ಉಂಟಾಗಿರುವ ಜಾಗತಿಕ ಇಂಧನ ಮತ್ತು ಸಾಗಾಟದ ಆತಂಕದ ಬಗ್ಗೆ ಚರ್ಚಿಸಿದ್ದಾರೆ. ವಿಶೇಷವಾಗಿ ಹಾರ್ಮುಜ್ ಜಲಸಂಧಿ ತೆರೆಯಾಗಿ, ಸುರಕ್ಷಿತವಾಗಿ ಮತ್ತು ಎಲ್ಲ ದೇಶಗಳ ಹಡಗುಗಳಿಗೆ ಲಭ್ಯವಾಗಿರಬೇಕು ಎಂಬುದರ ಮೇಲೆ ಒತ್ತಡ ನೀಡಲಾಗಿದೆ.

ಇದನ್ನೂ ಓದಿ:

ಜಾಗತಿಕ ಕಚ್ಚಾ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಯಾವುದೇ ಅಡಚಣೆ ಉಂಟಾದರೆ, ಅದರ ನೇರ ಪರಿಣಾಮ ಭಾರತ ಸೇರಿದಂತೆ ಅನೇಕ ದೇಶಗಳ ಇಂಧನ ಬೆಲೆಗಳ ಮೇಲೆ ಬೀಳುವ ಸಾಧ್ಯತೆ ಇದೆ. ಈ ಹಿನ್ನೆಲೆ ಭಾರತವು ಪರಿಸ್ಥಿತಿಯನ್ನು ಅತ್ಯಂತ ನಿಕಟವಾಗಿ ಗಮನಿಸುತ್ತಿದೆ.

ಇದೇ ವೇಳೆ, ಸಂಘರ್ಷವನ್ನು ಶಮನಗೊಳಿಸಲು ರಾಜತಾಂತ್ರಿಕ ಮಟ್ಟದಲ್ಲಿ ಯಾವ ರೀತಿಯ ಪ್ರಯತ್ನಗಳನ್ನು ಮುಂದುವರಿಸಬಹುದು ಎಂಬುದರ ಕುರಿತೂ ಮಾತುಕತೆ ನಡೆದಿರುವ ಮಾಹಿತಿ ಲಭ್ಯವಾಗಿದೆ. ಈ ಕರೆ ಪ್ರಸ್ತುತ ಜಾಗತಿಕ ಭದ್ರತಾ ಪರಿಸ್ಥಿತಿಯಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !