August 25, 2026
Tuesday, August 25, 2026
spot_img

ಅಂಬೇಡ್ಕರ್ ಜಯಂತಿ ಮೆರವಣಿಗೆ ವೇಳೆ ಏಕಾಏಕಿ ನುಗ್ಗಿದ ಕಾರು, ಬಾಲಕಿ ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿಕ್ಕಮಗಳೂರಿನ ಬಿಳೆಕಲ್ಲು ಗ್ರಾಮದಲ್ಲಿ ಅಂಬೇಡ್ಕರ್‌ ಜಯಂತಿ ಮೆರವಣಿಗೆ ಸಂಭ್ರಮ ಸ್ಮಶಾನವಾಗಿ ಬದಲಾಗಿದೆ.

ನಿನ್ನೆ ಸಾಯಂಕಾಲ ವೇಗವಾಗಿ ಬಂದ ಕಾರೊಂದು ಮೆರವಣಿಗೆಯಲ್ಲಿದ್ದ ಜನರ ಮೇಲೆ ಹರಿದಿದೆ. ಇದರಿಂದಾಗಿ ಏಳು ವರ್ಷದ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೆರವಣಿಗೆ ನಡೆಯುತ್ತಿದ್ದಾಗ, ನಿಯಂತ್ರಣ ತಪ್ಪಿದ ಕಾರು ಏಕಾಏಕಿ ಜನರ ಗುಂಪಿಗೆ ನುಗ್ಗಿ ಪಲ್ಟಿಯಾಗಿದೆ. ಇಂದಾವರ ಗ್ರಾಮದಿಂದ ಬಿಳೆಕಲ್ಲು ಗ್ರಾಮದ ತನ್ನ ತಂಗಿ ಮನೆಗೆ ಹೋಗಿದ್ದ 7 ವರ್ಷದ ಬಾಲಕಿ ಸಾನ್ವಿ ಕಾರು ಗುದ್ದಿದ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಅಪಘಾತದಲ್ಲಿ ನಿಶ್ಚಿತ (11ವ), ತೃಪ್ತಿ (11ವ), ತಿಮ್ಮರಾಜು (45ವ), ಉಷಾ (22ವ), ಸೃಷ್ಟಿ (18ವ), ನಾಗರಾಜು (28ವ), ಚೇತನ್ (16ವ) ಸೇರಿದಂತೆ ಒಟ್ಟು 9 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !