April 15, 2026
Wednesday, April 15, 2026
spot_img

ಯೋಗ, ಫಿಟ್ನೆಸ್​​ ಸೇರಿ 9 ಪ್ರತಿಜ್ಞೆಗಳನ್ನು ಮಾಡಿ ಎಂದು ಜನರಿಗೆ ಕರೆ ಕೊಟ್ಟ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಭಿವೃದ್ಧಿ ಹೊಂದಿದ ಕರ್ನಾಟಕ ಮತ್ತು ಅಭಿವೃದ್ಧಿ ಹೊಂದಿದ ಭಾರತ’ವನ್ನು ಸಾಕಾರಗೊಳಿಸಲು, ನೀರಿನ ಸಂರಕ್ಷಣೆ, ನೈಸರ್ಗಿಕ ಕೃಷಿ, ಫಿಟ್ನೆಸ್ ಮತ್ತು ಸೇವೆ ಸೇರಿದಂತೆ ಒಂಬತ್ತು ಸಾಮೂಹಿಕ ಪ್ರತಿಜ್ಞೆಗಳನ್ನು ಸ್ವೀಕರಿಸುವಂತೆ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಯಾವುದೀ ಒಂಬತ್ತು ಪ್ರತಿಜ್ಞೆ?

ಜಲಸಂರಕ್ಷಣೆ: ಎಲ್ಲ ಕಡೆ ನೀರು ಉಳಿಸುವುದು.

ಎಲ್ಲರೂ ತಮ್ಮ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವುದು.

ಮನೆ, ಸಾರ್ವಜನಿಕ ತಾಣ ಎಲ್ಲ ಕಡೆಯೂ ಸ್ವಚ್ಛತೆ ಕಾಪಾಡುವುದು.

ಸ್ವದೇಶಿ ನಿರ್ಮಿತ ವಸ್ತುಗಳನ್ನು ಬಳಸಿ ಆತ್ಮನಿರ್ಭರತೆ ಬೆಳೆಸುವುದು.

ದೇಶದೊಳಗೆ ಪ್ರವಾಸ ಮಾಡುವುದು ಮೂಲಕ ಆ ತಾಣಗಳನ್ನು ಉತ್ತೇಜಿಸುವುದು.

ರಾಸಾಯನಿಕ ಮುಕ್ತ ಕೃಷಿಯ ಮೂಲಕ ಜನತೆಯ ಆರೋಗ್ಯ ಕಾಪಾಡುವುದು.

ಎಚ್‌ಡಿ ದೇವೇಗೌಡರು ರಾಗಿ ಮುದ್ದೆಯನ್ನು ಜನಪ್ರಿಯಗೊಳಿಸಿದರು. ಅದು ಆರೋಗ್ಯದ ಪ್ರತೀಕ. ಉತ್ತಮ ಆಹಾರದಿಂದ ಉತ್ತಮ ಚಿಂತನೆ.

ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ವ್ಯಾಯಾಮ, ಯೋಗ.

ಸೇವಾಭಾವನೆ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !