October 16, 2026
Friday, October 16, 2026
spot_img

VIRAL | ರೀಲ್ಸ್‌ ಹುಚ್ಚಿಗೆ ಸ್ಟೇಡಿಯಂನಲ್ಲಿ ದುಬಾರಿ ಉಂಗುರ ಕಳೆದುಕೊಂಡ ನೀರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಂಜಾಬ್‌ನಲ್ಲಿ ನಡೆದ ಐಪಿಎಲ್‌ ಪಂದ್ಯದ ವೇಳೆ ರೀಲ್ಸ್‌ ಮಾಡಲು ಹೋದ ಯುವತಿಯೊಬ್ಬಳು ಉಂಗುರವನ್ನೇ ಕಳೆದುಕೊಂಡಿದ್ದಾಳೆ.

ಮಹಾರಾಜ ಯಾದವೀಂದ್ರ ಸಿಂಗ್ ಪಿಸಿಎ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಐಪಿಎಲ್ ಪಂದ್ಯ ನಡೆದಿತ್ತು. ಈ ಕ್ರೀಡಾಂಗಣದಲ್ಲಿ ರೀಲ್ ಮಾಡು ಹೋಗಿ ಮಹಿಳೆಯೊಬ್ಬರು 70,000 ರೂ.ಉಂಗುರ ಕಳೆದು ಕೊಂಡಿದ್ದಾರೆ. ಮಧು ಪ್ರಿಯಾ ಎಂಬ ಯುವತಿ ಇನ್ ಸ್ಟಾಗ್ರಾಮ್ ರೀಲ್ಸ್ ಮಾಡಲು ಹೋಗಿ ಈ ಪಜಿತಿಗೆ ಸಿಲುಕಿದ್ದಾರೆ.

https://www.instagram.com/reels/DXCGobqii50

ಇದೀಗ ಇನ್ಸ್ಟಗ್ರಾಮ್‌ನಲ್ಲಿ ಮತ್ತೊಂದು ಪೋಸ್ಟ್‌ ಹಂಚಿಕೊಂಡಿದ್ದು, ನನ್ನ ದುಬಾರಿ ಉಂಗುರ ಕಳೆದುಹೋಗಿದೆ. ದಯವಿಟ್ಟು ಯಾರಿಗಾದರೂ ಸಿಕ್ಕರೆ ನನಗೆ ತಲುಪಿಸಿ ಎಂದು ಮನವಿ ಮಾಡಿದ್ದಾರೆ.

ಯಾರಾದ್ರೂ ಗೋಲ್ಡ್‌ ಉಂಗುರದಲ್ಲಿ ಇಂಥ ರೀಲ್ಸ್‌ ಮಾಡ್ತಾರಾ? ಕಾಸ್ಟ್ಲಿ ರೀಲ್ಸ್‌ ಇದು, ಇಂಥ ಕೆಲಸ ಯಾಕೆ ಮಾಡ್ತೀರಿ ಮೇಡಂ ಎಂದು ಕಮೆಂಟ್‌ ಮಾಡಿದ್ದಾರೆ.

Must Read