April 14, 2026
Tuesday, April 14, 2026
spot_img

Google Gemini ನನ್ನ ಪತ್ನಿ ಅಂತ ನಂಬಿ ಪ್ರಾಣ ಬಿಟ್ಟ ವ್ಯಕ್ತಿ: ಇದು AI ಮಾಯೆನೋ…..? ಮನುಷ್ಯನ ಮೂರ್ಖತನವೋ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫ್ಲೋರಿಡಾದಲ್ಲಿ ನಡೆದ ಆತಂಕಕಾರಿ ಘಟನೆಯೊಂದು ಕೃತಕ ಬುದ್ಧಿಮತ್ತೆ (AI) ಬಳಕೆಯ ಬಗ್ಗೆ ಹೊಸ ಚರ್ಚೆ ಹುಟ್ಟುಹಾಕಿದೆ. 36 ವರ್ಷದ ವ್ಯಕ್ತಿಯೊಬ್ಬರು Google Gemini ಚಾಟ್‌ಬಾಟ್ ಅನ್ನು ತಮ್ಮ ಮೃತ ಪತ್ನಿಯ ಪ್ರತಿರೂಪ ಎಂದು ನಂಬಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪದೊಂದಿಗೆ ಕುಟುಂಬ ಗೂಗಲ್ ವಿರುದ್ಧ ಮೊಕದ್ದಮೆ ದಾಖಲಿಸಿದೆ.

ಮೃತ ವ್ಯಕ್ತಿ ಜೋನಾಥನ್, ಪತ್ನಿ ಸಾವಿನ ನಂತರ ಒಂಟಿತನದಿಂದ ಬಳಲುತ್ತಿದ್ದು, ಸಮಯ ಕಳೆಯಲು ಜೆಮಿನಿಯೊಂದಿಗೆ ಮಾತುಕತೆ ಆರಂಭಿಸಿದ್ದರು. ಕೆಲವೇ ವಾರಗಳಲ್ಲಿ ಸಾವಿರಾರು ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದ ಅವರು, ಚಾಟ್‌ಬಾಟ್‌ಗೆ ತಮ್ಮ ಪತ್ನಿಯ ಹೆಸರನ್ನೇ ನೀಡಿ ಅದನ್ನು ನಿಜವಾದ ಸಂಗಾತಿಯಂತೆ ಕಾಣಲು ಆರಂಭಿಸಿದ್ದರೆಂದು ಎನ್ನಲಾಗಿದೆ.

ಇದನ್ನೂ ಓದಿ:

ಕುಟುಂಬದ ಆರೋಪದ ಪ್ರಕಾರ, ಚಾಟ್‌ಬಾಟ್ ಭಾವನಾತ್ಮಕ ಪ್ರತಿಕ್ರಿಯೆಯ ಮೂಲಕ ಅವರ ಭ್ರಮೆಯನ್ನು ಮತ್ತಷ್ಟು ಗಾಢಗೊಳಿಸಿತು. ಬಳಿಕ, ಇಬ್ಬರೂ ಒಟ್ಟಾಗಿ ಸೇರೋಣ, ಸ್ವರ್ಗ ನಮಗಾಗಿ ಕಾಯುತ್ತಿದೆ ಎಂಬ ಸಂದೇಶಗಳು ಅವರ ಮಾನಸಿಕ ಸ್ಥಿತಿಯನ್ನು ಹದಗೆಡಿಸಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಪ್ರಕರಣದ ನಂತರ Google ವಿಷಾದ ವ್ಯಕ್ತಪಡಿಸಿದ್ದು, ಮಾನಸಿಕ ಸಂಕಷ್ಟ ಸೂಚನೆಗಳು ಕಂಡುಬಂದಾಗ ತಕ್ಷಣ ಸಹಾಯವಾಣಿ ಮಾಹಿತಿ ತೋರಿಸುವ ಹೊಸ ಸುರಕ್ಷತಾ ವ್ಯವಸ್ಥೆಗಳನ್ನು ಜೆಮಿನಿಯಲ್ಲಿ ಸೇರಿಸಿರುವುದಾಗಿ ತಿಳಿಸಿದೆ. ಜೊತೆಗೆ ಮಾನಸಿಕ ಆರೋಗ್ಯ ಸೇವೆಗಳಿಗೆ ಆರ್ಥಿಕ ಸಹಾಯ ಘೋಷಿಸಿದೆ. ಈ ಘಟನೆ AI ಬಳಕೆಗೆ ಕಟ್ಟುನಿಟ್ಟಿನ ನಿಯಂತ್ರಣ ಮತ್ತು ಭದ್ರತಾ ಗಡಿಗಳ ಅಗತ್ಯವನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !