October 7, 2026
Wednesday, October 7, 2026
spot_img

ASTRO | ರಸ್ತೆಯಲ್ಲಿ ಹೋಗುವಾಗ ಇವುಗಳನ್ನು ನೋಡಿದರೆ ಹೊರಟ ಕೆಲಸ ಆಗೋದು ಗ್ಯಾರಂಟಿ

ನಾವು ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೋಗಬೇಕು ಎಂದಾದರೆ ಶುಭಶಕುನಗಳನ್ನು ಹುಡುಕುತ್ತೀವಿ. ಇಂದು ಹೋಗುತ್ತಿರುವ ಕೆಲಸ ಆದರೆ ಸಾಕು ಎಂದು ಬೇಡಿಕೊಳ್ಳುತ್ತೀವಿ. ರಸ್ತೆಯಲ್ಲಿ ಹೋಗುವಾಗ ಈ ವಸ್ತು, ಪ್ರಾಣಿ ಇನ್ನಿತರೆಗಳು ನಿಮ್ಮ ಕಣ್ಣಿಗೆ ಬಿದ್ದರೆ ನೀವು ಹೋಗುವ ಕೆಲಸ ಆಗುತ್ತದೆ ಎಂದರ್ಥ.

ದಾರಿಯಲ್ಲಿ ನೀವು ಹೋಗುವಾಗ ಶಂಖದ ನಾದ ಕೇಳಿಸಿದರೆ ಅದು ಉತ್ತಮ ಚಿಹ್ನೆಯಾಗಿದೆ.

ಹೋಗುವಾಗ ಎಲ್ಲಾದರೂ ಸ್ವಸ್ತಿಕ ಚಿಹ್ನೆ ಕಾಣಿಸಿದರೆ ಅಥವಾ ನಾಣ್ಯ ಸಿಕ್ಕರೆ ಅದು ಶುಭದ ಸಂಕೇತ. ನಾಣ್ಯವನ್ನು ದೇವರ ಮನೆಯಲ್ಲಿಟ್ಟು ಪೂಜಿಸಿ.

ದಾರಿಯಲ್ಲಿ ಅಪರೂಪಕ್ಕೆ ಎಲ್ಲಾದರೂ ಕುದುರೆ ಕಾಲುಗಳು ಕಾಣಿಸಿದರೆ ಅದು ಉತ್ತಮ.

ರಸ್ತೆಯಲ್ಲಿ ಕಬ್ಬಿನ ರಾಶಿ ಕಾಣುವುದು ಅಥವಾ ಹಸುವಿನ ಅಂಬಾ ಎನ್ನುವ ದನಿ ಕೇಳಿದರೆ ಅದು ನಿಮಗೆ ಆಶೀರ್ವಾದದಂತೆ.

ಹಣದ ವ್ಯವಹಾರ ಮಾಡುವಾಗ, ನೋಟು ಎಣಿಸುವಾಗ ಮಿಸ್‌ ಆಗಿ ಒಂದು ನೋಟು ಕೆಳಗೆ ಬಿದ್ದರೂ ಅದು ಒಳ್ಳೆಯದು.

ದಾರಿಯಲ್ಲಿ ಕಸವನ್ನು ಗುಡಿಸುವವರನ್ನು ನೋಡುವುದು, ನವಿಲು ಗರಿಬಿಚ್ಚಿದ್ದನ್ನು ನೋಡುವುದು , ನಗುತ್ತಿರುವ ಹೆಣ್ಣುಮಗುವನ್ನು ನೋಡಿದರೆ ಅದು ಲಕ್ಷ್ಮಿಯ ಸಂಕೇತವಾಗಿದೆ.

Must Read