June 24, 2026
Wednesday, June 24, 2026
spot_img

Viral | ಮೊಮ್ಮಗಳನ್ನೂ ಬಿಡದಂತೆ ಪೊಲೀಸ್‌ ಬುದ್ಧಿ ತೋರಿಸಿದ ಅಜ್ಜಿ! ಕೈ ಕಾಲು ಕಟ್ಟಿ ಬಿಸಿಲಿಗೆ ಮಲಗಿಸಿಬಿಟ್ರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಕ್ಕಳ ರಕ್ಷಣೆಗಾಗಿ ಪೊಲೀಸ್‌ ಇಲಾಖೆಯಲ್ಲಿ ಮಹಿಳಾ ಮಿತ್ರ ಆಗಿ ಕೆಲಸ ಮಾಡುವ ಸಿಬ್ಬಂದಿಯೇ ತನ್ನ ಮೊಮ್ಮಗಳ ಮೇಲೆ ಅಮಾನವೀಯವಾಗಿ ವರ್ತಿಸಿದ್ದಾರೆ.

ಫರೀದ್‌ಕೋಟ್‌ನ ದೋಗರ್ ಬಸ್ತಿ ನಿವಾಸಿ ಎಎಸ್‌ಐ ಸರಬ್ಜಿತ್‌ ಕೌರ್‌ ಎನ್ನುವವರು ತನ್ನ ಐದು ವರ್ಷದ ಮೊಮ್ಮಗಳ ಕೈ ಮತ್ತು ಕಾಲಿಗೆ ಬಟ್ಟೆ ಕಟ್ಟಿ ಆ ಬಟ್ಟೆಯನ್ನು ಮನೆಯ ಹೊರಗಿರುವ ಸುಡುವ ಗೇಟ್‌ಗೆ ಕಟ್ಟಿಹಾಕಿದ್ದಾರೆ.

ಮಗುವಿನ ಜೋರು ಅಳು ಕೇಳಿ ಪಕ್ಕದ ಮನೆಯವರು ಬಂದು ನೋಡಿದ್ದಾರೆ. ಮಗುವನ್ನು ಅಜ್ಜಿ ಗೇಟಿಗೆ ಕಟ್ಟಿ ಹಾಕಿ ಕ್ಯಾರೆ ಎನ್ನದಂತೆ ಒಳಕ್ಕೆ ಹೋಗಿ ಬಾಗಿಲು ಹಾಕಿದ್ದಾರೆ. ಪಕ್ಕದ ಮನೆಯವರು ಫೋನ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ.

ತಕ್ಷಣ ಪಂಜಾಬ್‌ ಪೊಲೀಸರು ಮನೆಯ ಬಳಿ ಬಂದು ಅಜ್ಜಿಗೆ ವಾರ್ನಿಂಗ್‌ ನೀಡಿದ್ದಾರೆ. ಮಗುವಿನ ತಂದೆ ತಾಯಿ ವಿದೇಶದಲ್ಲಿ ವಾಸವಿದ್ದಾರೆ. ಅಜ್ಜಿಯ ಜೊತೆ ಮಗಳು ಸೇಫ್‌ ಆಗಿ ಇರುತ್ತಾಳೆ ಎಂದು ಬಿಟ್ಟು ಹೋಗಿದ್ದಾರೆ. ಇದೀಗ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಗೆ ನೀಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !