April 16, 2026
Thursday, April 16, 2026
spot_img

SHOCKING | ಕೃಷ್ಣಾ ನದಿಯ ಬಳಿ ಕುರಿಗಾಹಿ ಮೇಲೆ ಮೊಸಳೆ ಡೆಡ್ಲಿ ಅಟ್ಯಾಕ್‌, ಬಲಗೈ ಕಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೇವದುರ್ಗ ತಾಲೂಕಿನ ಹಿರೇರಾಯಕುಂಪಿ ಬಳಿ ಕೃಷ್ಣಾ ನದಿಯಲ್ಲಿ ಕುರಿಗಾಹಿ ಮೇಲೆ ಮೊಸಳೆ ದಾಳಿ ಮಾಡಿದ್ದು, ಬಲಗೈಯನ್ನು ತಿಂದುಹಾಕಿದೆ.

ಮೊಸಳೆ ದಾಳಿಯಿಂದ ಕೈ ಕಳೆದುಕೊಂಡ ಕುರಿಗಾಹಿ ಹೊನ್ನಗುಡೆಪ್ಪ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃಷ್ಣಾ ನದಿಯಲ್ಲಿ ಕುರಿ ಮರಿಗಳಿಗೆ ನೀರು ತರಲು ಹೋದಾಗ ಮೊಸಳೆ ದಾಳಿ ನಡೆದಿದೆ.

ಏಕಾಏಕಿ ದಾಳಿ ಮಾಡಿ ಕೈ ಕಚ್ಚಿ ನದಿಯಲ್ಲಿ ಎಳೆದುಕೊಂಡು ಹೋಗಿದ್ದ ಮೊಸಳೆ ಹೊನ್ನಗುಡೆಪ್ಪನನ್ನ ನೀರಿನಲ್ಲಿ ಮುಳುಗಿಸಿದೆ. ನೀರಿನಲ್ಲಿ ಎಳೆದೊಯ್ದರು ಹೋರಾಡಿ ಹೊರಗೆ ಬಂದ ಹೊನ್ನಗುಂಡಪ್ಪ ಮೊಸಳೆಯಿಂದ ತಪ್ಪಿಸಿಕೊಳ್ಳಲು ಕೈ ಎಳೆದುಕೊಂಡಾಗ ಬಲಗೈ ತುಂಡಾಗಿದೆ.

ರಾಯಚೂರಿನ ಓಪೆಕ್ ಆಸ್ಪತ್ರೆಗೆ ಗಾಯಾಳು ದಾಖಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಕೃಷ್ಣಾ ನದಿ ಪಾತ್ರದಲ್ಲಿ ಮೊಸಳೆಗಳ ಸಂಖ್ಯೆ ಹೆಚ್ಚಾಗಿದ್ದು, ಸ್ಪಲ್ಪ ಮೈಮರೆತರು ಮೊಸಳೆ ದಾಳಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ ಅರಣ್ಯ ಇಲಾಖೆ ಮೊಸಳೆಗಳ ನಿಯಂತ್ರಣ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !