April 16, 2026
Thursday, April 16, 2026
spot_img

FOOD | ಮನೆಯಲ್ಲೇ ಸುಲಭವಾಗಿ ಮಾಡಿ ಢಾಬಾ ಸ್ಟೈಲ್ ಮೊಟ್ಟೆ ಮಸಾಲಾ

ಅನ್ನ, ಚಪಾತಿ, ರೊಟ್ಟಿ ಅಥವಾ ಪರೋಟಾ ಜೊತೆ ಸವಿಯಲು ಸೂಪರ್ ಕಾಂಬಿನೇಷನ್ ಅಂದ್ರೆ ಮೊಟ್ಟೆ ಮಸಾಲಾ. ಕಡಿಮೆ ಸಮಯದಲ್ಲಿ, ಸುಮಾರು 10–15 ನಿಮಿಷಗಳಲ್ಲಿ ತಯಾರಾಗುವ ಈ ಡಿಶ್ ರುಚಿಯಲ್ಲೂ ಸಖತ್, ಪ್ರೋಟೀನ್‌ನಲ್ಲೂ ಸಮೃದ್ಧ.

ಬೇಕಾಗುವ ಪದಾರ್ಥಗಳು

ಬೇಯಿಸಿದ ಮೊಟ್ಟೆ – 4 ರಿಂದ 5
ಈರುಳ್ಳಿ – 2 (ಸಣ್ಣದಾಗಿ ಕತ್ತರಿಸಿದದ್ದು)
ಟೊಮೆಟೊ – 2 (ಸಣ್ಣದಾಗಿ ಕತ್ತರಿಸಿದದ್ದು)
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಎಣ್ಣೆ – 2 ರಿಂದ 3 ಟೇಬಲ್ ಸ್ಪೂನ್
ಸಾಸಿವೆ – ½ ಟೀ ಸ್ಪೂನ್
ಜೀರಿಗೆ – ½ ಟೀ ಸ್ಪೂನ್
ಕರಿಬೇವು – ಸ್ವಲ್ಪ
ಅರಿಶಿನ – ¼ ಟೀ ಸ್ಪೂನ್
ಖಾರದ ಪುಡಿ – 1 ಟೀ ಸ್ಪೂನ್
ಧನಿಯಾ ಪುಡಿ – 1 ಟೀ ಸ್ಪೂನ್
ಗರಂ ಮಸಾಲಾ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಅಗತ್ಯಕ್ಕೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

ಮಾಡುವ ವಿಧಾನ

ಮೊದಲು ಬೇಯಿಸಿದ ಮೊಟ್ಟೆಗಳಿಗೆ ಸಣ್ಣದಾಗಿ ಚೀರು ಹಾಕಿ ಇಡಿ. ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಅದರಲ್ಲಿ ಅರಿಶಿನ ಮತ್ತು ಚಿಟಿಕೆ ಖಾರದ ಪುಡಿ ಸೇರಿಸಿ ಮೊಟ್ಟೆಗಳನ್ನು 2–3 ನಿಮಿಷ ಹುರಿದು ಪಕ್ಕಕ್ಕೆ ತೆಗೆದು ಇಡಿ.

ಅದೇ ಬಾಣಲೆಗೆ ಉಳಿದ ಎಣ್ಣೆ ಹಾಕಿ ಸಾಸಿವೆ, ಜೀರಿಗೆ ಮತ್ತು ಕರಿಬೇವು ಒಗ್ಗರಣೆ ಮಾಡಿ. ನಂತರ ಈರುಳ್ಳಿ ಹಾಕಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ. ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಬೇಯಿಸಿ.

ಈಗ ಟೊಮೆಟೊ, ಉಪ್ಪು, ಅರಿಶಿನ, ಖಾರದ ಪುಡಿ, ಧನಿಯಾ ಪುಡಿ ಮತ್ತು ಗರಂ ಮಸಾಲಾ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಎಣ್ಣೆ ಬಿಡುವವರೆಗೆ 3–4 ನಿಮಿಷ ಬೇಯಿಸಿ.

ನಂತರ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಗ್ರೇವಿ ಕುದಿಯಲು ಬಿಡಿ. ಕೊನೆಗೆ ಹುರಿದ ಮೊಟ್ಟೆಗಳನ್ನು ಸೇರಿಸಿ 5 ನಿಮಿಷ ಸಣ್ಣ ಉರಿಯಲ್ಲಿ ಮುಚ್ಚಿ ಬೇಯಿಸಿ.

ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ ಬಿಸಿ ಬಿಸಿ ಸವಿಯಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !