July 12, 2026
Sunday, July 12, 2026
spot_img

ಕಾಫಿತೋಟಕ್ಕೆ ನುಗ್ಗಿದ್ದ ಕಾಡಾನೆಗಳ ಗ್ಯಾಂಗ್‌ನ್ನು ವಾಪಾಸ್‌ ಕಾಡಿಗಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೊಡಗು ಜಿಲ್ಲೆಯ ಮಾಲ್ದಾರೆ ಪ್ರದೇಶದ ಕಾಫಿ ತೋಟಗಳಿಗೆ ನುಗ್ಗಿದ್ದ ಕಾಡಾನೆ ಹಿಂಡನ್ನು ಮತ್ತೆ ಕಾಡಿಗೆ ಕಳುಹಿಸಲಾಗಿದೆ.

ಖಾಸಗಿ ಕಾಫಿ ತೋಟಗಳಿಗೆ ನುಗ್ಗಿದ್ದ 11ಕ್ಕೂ ಹೆಚ್ಚು ಕಾಡಾನೆಗಳಿದ್ದ ಹಿಂಡನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮೂರು ಗಂಟೆಗಳ ಕಾರ್ಯಾಚರಣೆಯ ಬಳಿಕ ಯಶಸ್ವಿಯಾಗಿ ಮತ್ತೆ ಕಾಡಿಗೆ ಕಳುಹಿಸಿದ್ದಾರೆ. ಬೆಳೆ ನಷ್ಟವಾಗುತ್ತಿದೆ. ತೋಟಗಳಿಗೆ ಹೋಗೋದಕ್ಕೆ ಭಯವಾಗ್ತಿದೆ ಎಂದು ಈ ಭಾಗದ ಜನ ದೂರು ನೀಡಿದ್ದರು.

ತಕ್ಷಣ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಆನೆಗಳನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗ್ಗೆಯೇ ಆರಂಭವಾದ ಕಾರ್ಯಾಚರಣೆಯಲ್ಲಿ ಆನೆಗಳು ಕಾಫಿ ತೋಟಗಳ ಮಧ್ಯೆ ಸಂಚರಿಸುತ್ತಿದ್ದರಿಂದ ಅವುಗಳನ್ನು ನಿಯಂತ್ರಿಸುವುದು ಸವಾಲಾಗಿ ಪರಿಣಮಿಸಿತ್ತು. ವಿಶೇಷವಾಗಿ ಮರಿ ಆನೆ ಗುಂಪಿನಲ್ಲಿ ಇದ್ದುದರಿಂದ ಕಾರ್ಯಾಚರಣೆ ಇನ್ನಷ್ಟು ಕಠಿಣವಾಗಿತ್ತು. ಪಟಾಕಿಗಳನ್ನು ಸಿಡಿಸುತ್ತಾ ಆನೆಗಳನ್ನು ಕಾಡಿನ ಕಡೆ ಕಳುಹಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !