November 16, 2026
Monday, November 16, 2026
spot_img

ಪರಂಪರೆ ಉಳಿಸಿಕೊಂಡೇ ಕುಮಾರಕೃಪ ಮರುವಿನ್ಯಾಸ: ‘ಗಂಗಾ’ ನಿವಾಸದ ಕುರಿತು ಸಿಎಂ ಡಿಕೆಶಿ ಮಾತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಳಕೆಯಾಗದೆ ಇದ್ದ ಕುಮಾರಕೃಪ ಅತಿಥಿ ಗೃಹವನ್ನು ಅಧಿಕೃತ ನಿವಾಸವಾಗಿ ಪರಿವರ್ತಿಸಿ ‘ಗಂಗಾ’ ಎಂದು ಮರುನಾಮಕರಣ ಮಾಡಲಾಗಿದೆ. ಕಟ್ಟಡದ ಪರಂಪರೆಯನ್ನು ಉಳಿಸಿಕೊಂಡೇ ಶೇ.10ರಷ್ಟು ಮರುವಿನ್ಯಾಸ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

ಶಾಸಕರು, ಸಂಸದರಿಗೆ ಅಹ್ವಾನ

ಸೋಮವಾರ ನೂತನ ಅಧಿಕೃತ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಹಿಂದಿನ ಸರ್ಕಾರಿ ನಿವಾಸ ಚಿಕ್ಕದಾಗಿದ್ದ ಹಿನ್ನೆಲೆಯಲ್ಲಿ ಕುಮಾರಕೃಪ ಅತಿಥಿ ಗೃಹವನ್ನು ಅಧಿಕೃತ ನಿವಾಸವನ್ನಾಗಿ ಪರಿವರ್ತಿಸಲಾಗಿದೆ. ಸೋಮವಾರ ಖಾಸಗಿ ಪೂಜೆ ನೆರವೇರಿಸಿದ್ದು, ಗುರುವಾರ ರಾಜ್ಯದ 224 ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ಆಹ್ವಾನಿಸಲಾಗಿದೆ ಎಂದರು.

ಹಳೆಯ ಪೀಠೋಪಕರಣಗಳ ಬಳಕೆ

ನವೀಕರಣದ ವೆಚ್ಚದ ಕುರಿತು ಸ್ಪಷ್ಟನೆ ನೀಡಿದ ಅವರು, ಭದ್ರತೆ ಮತ್ತು ರಸ್ತೆ ಸೌಕರ್ಯಕ್ಕೆ ಹೆಚ್ಚಿನ ವೆಚ್ಚವಾಗಿದೆ. ಶೇ.90ರಷ್ಟು ಪೀಠೋಪಕರಣಗಳು ತಮ್ಮ ಖಾಸಗಿ ಬಳಕೆಯದ್ದಾಗಿದ್ದು, ಕಡಿಮೆ ಬೆಲೆಯ ಗ್ರಾನೈಟ್ ಬಳಸಲಾಗಿದೆ. ಟೀಕೆಗಳು ಬರಬಹುದೆಂಬ ಕಾರಣಕ್ಕೆ ಹಳೆಯ ಪೀಠೋಪಕರಣಗಳನ್ನೇ ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:

ಕಟ್ಟಡದ ಪರಂಪರೆಗೆ ಧಕ್ಕೆಯಾಗಿದೆ ಎಂಬ ವಿರೋಧ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಟೀಕೆ ಮಾಡುವುದು ಅವರ ಕರ್ತವ್ಯ. ಅವರನ್ನೂ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದರು.

ಶಾಸಕರು ಮತ್ತು ಅಧಿಕಾರಿಗಳ ಸಭೆಗಳಿಗೆ ಇಲ್ಲಿ ಅವಕಾಶ ಕಲ್ಪಿಸಲಾಗುವುದು. ಸಾರ್ವಜನಿಕರ ಭೇಟಿಗಾಗಿ ಪಕ್ಕದ ಕೃಷ್ಣಾದಲ್ಲಿ ಪ್ರತ್ಯೇಕ ಸಭಾಂಗಣ ನಿರ್ಮಿಸಲಾಗುತ್ತಿದ್ದು, ಇದಕ್ಕೆ ಒಂದೆರಡು ತಿಂಗಳು ಬೇಕಾಗಬಹುದು ಎಂದು ತಿಳಿಸಿದರು.

Must Read