November 16, 2026
Monday, November 16, 2026
spot_img

ಟೀಕೆಗಳಿಗೆ ಬ್ಯಾಟ್‌ನಲ್ಲೇ ಉತ್ತರಿಸಿದ ಸೂರ್ಯಕುಮಾರ್! 29 ಎಸೆತಗಳಲ್ಲಿ 82 ರನ್ ಸಿಡಿಸಿ ಗುಜರಾತ್ ಬೌಲರ್‌ಗಳ ಬೆವರಿಳಿಸಿದ SKY

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಟೀಕೆಗಳಿಗೆ ಮಾತಿನ ಮೂಲಕವಲ್ಲ, ಬ್ಯಾಟ್‌ನ ಮೂಲಕವೇ ಉತ್ತರಿಸುವುದು ಹೇಗೆ ಎಂಬುದನ್ನು ಟೀಂ ಇಂಡಿಯಾದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಗುಜರಾತ್ ವಿರುದ್ಧ ನಡೆದ ಪಂದ್ಯದಲ್ಲಿ ಸೂರ್ಯ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಕೇವಲ 29 ಎಸೆತಗಳಲ್ಲಿ 82 ರನ್ ಸಿಡಿಸುವ ಮೂಲಕ ಮುಂಬೈ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.

29 ಎಸೆತ, 82 ರನ್: SKY ಅಬ್ಬರ

ಗುಜರಾತ್ ತಂಡ ನೀಡಿದ್ದ 198 ರನ್‌ಗಳ ಗುರಿ ಬೆನ್ನಟ್ಟಿದ ಮುಂಬೈ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತ್ತು. ಮೊದಲ ಎರಡು ಓವರ್‌ಗಳಲ್ಲೇ ಅಂಗ್‌ಕ್ರಿಶ್ ರಘುವಂಶಿ (4) ಮತ್ತು ಮುಶೀರ್ ಖಾನ್ (14) ವಿಕೆಟ್ ಕಳೆದುಕೊಂಡರು. ಈ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ನಾಯಕ ಸೂರ್ಯಕುಮಾರ್ ಪಂದ್ಯದ ದಿಕ್ಕನ್ನೇ ಬದಲಿಸಿದರು.

ಇದನ್ನೂ ಓದಿ:

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಅವರು, 29 ಎಸೆತಗಳಲ್ಲಿ 82 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ 7 ಸಿಕ್ಸರ್ ಹಾಗೂ 9 ಬೌಂಡರಿಗಳು ಸೇರಿದ್ದವು. ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸೂರ್ಯ, 282ಕ್ಕೂ ಅಧಿಕ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದರು.

ಸೂರ್ಯಗೆ ಉತ್ತಮ ಸಾಥ್ ನೀಡಿದ ಸರ್ಫರಾಜ್ ಖಾನ್ ಕೂಡ ಕೇವಲ 17 ಎಸೆತಗಳಲ್ಲಿ ಅಜೇಯ 40 ರನ್ ಸಿಡಿಸಿದರು. ಪರಿಣಾಮ ಮುಂಬೈ ತಂಡ 15.4 ಓವರ್‌ಗಳಲ್ಲೇ ಗುರಿ ತಲುಪಿ ಭರ್ಜರಿ ಜಯ ದಾಖಲಿಸಿತು.

ಎರಡು ಪಂದ್ಯ, ಎರಡು ಸ್ಫೋಟಕ ಇನ್ನಿಂಗ್ಸ್

ಈ ಟೂರ್ನಿಯಲ್ಲಿ ಸೂರ್ಯಕುಮಾರ್ ತಮ್ಮ ಅದ್ಭುತ ಫಾರ್ಮ್ ಮುಂದುವರಿಸಿದ್ದಾರೆ. ಮೊದಲ ಪಂದ್ಯದಲ್ಲಿ 21 ಎಸೆತಗಳಲ್ಲಿ ಅಜೇಯ 60 ರನ್ ಗಳಿಸಿದ್ದ ಅವರು, ಇದೀಗ ಗುಜರಾತ್ ವಿರುದ್ಧ 82 ರನ್ ಸಿಡಿಸಿದ್ದಾರೆ. ಎರಡು ಪಂದ್ಯಗಳಲ್ಲಿ ಒಟ್ಟು 142 ರನ್ ಗಳಿಸಿರುವುದು ಅವರ ಬ್ಯಾಟಿಂಗ್ ಲಯಕ್ಕೆ ಸಾಕ್ಷಿಯಾಗಿದೆ.

Must Read

Skip to toolbar