July 4, 2026
Saturday, July 4, 2026
spot_img

ಮುಂಬೈಗೆ ಮಾಡು ಇಲ್ಲವೇ ಮಡಿ ಹೋರಾಟ: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 19ನೇ ಆವೃತ್ತಿಯ 24ನೇ ಹಣಾಹಣಿಯಲ್ಲಿ ಇಂದು ಬಲಿಷ್ಠ ಮುಂಬೈ ಇಂಡಿಯನ್ಸ್ ಮತ್ತು ಫಾರ್ಮ್‌ನಲ್ಲಿರುವ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿವೆ. ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋತು ಕಂಗೆಟ್ಟಿರುವ ಮುಂಬೈಗೆ ಈ ಪಂದ್ಯ ತವರಿನಲ್ಲಿ ಅಸ್ತಿತ್ವದ ಪ್ರಶ್ನೆಯಾಗಿದೆ.

ಮತ್ತೊಂದೆಡೆ, ಈ ಸೀಸನ್‌ನಲ್ಲಿ ಅದ್ಭುತ ಲಯದಲ್ಲಿರುವ ಪಂಜಾಬ್ ಕಿಂಗ್ಸ್ ಈಗಾಗಲೇ 4 ಪಂದ್ಯಗಳಲ್ಲಿ 3 ಜಯ ದಾಖಲಿಸಿ ಬೀಗುತ್ತಿದೆ. ಪಂದ್ಯದ ಆರಂಭದಲ್ಲೇ ಟಾಸ್ ಗೆದ್ದ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಆಯ್ದುಕೊಳ್ಳುವ ಮೂಲಕ ಮುಂಬೈ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ.

ವಾಂಖೆಡೆಯ ‘ರನ್ ಮಳೆ’ಯ ಪಿಚ್‌ನಲ್ಲಿ ಮುಂಬೈ ತನ್ನ ಹಳೆಯ ವೈಭವ ಮರುಕಳಿಸುತ್ತಾ ಅಥವಾ ಪಂಜಾಬ್ ತನ್ನ ವಿಜಯಯಾತ್ರೆ ಮುಂದುವರಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !