ವಯಸ್ಸು ಮೂವತ್ತಷ್ಟೇ ಆದರೆ ಸಾಕಷ್ಟು ಬಿಳಿ ಕೂದಲು ತಲೆಯನ್ನು ಆವರಿಸಿಕೊಂಡಿದ್ದು ವಯಸ್ಸಾದಂತೆ ಕಾಣ್ತಿದ್ದೀರಾ? ಬಿಳಿ ಕೂದಲು ಒಮ್ಮೆ ಬಂದ್ರೆ ಹೋಗೋದೇ ಇಲ್ಲ ಅನ್ನೋದು ಸುಳ್ಳು. ಕೂದಲ ಬಣ್ಣವನ್ನು ರಿವರ್ಸ್ ಮಾಡೋದು ಹೀಗೆ..
ಮೆಹೆಂದಿಯನ್ನು ಕಲಸಿ ತಲೆಗೆ ಹಚ್ಚಿ, ತೊಳೆಯಿರಿ. ಆಮೇಲೆ ಕಪ್ಪು ಮೆಹೆಂದಿಯನ್ನು ಹಚ್ಚಿ ತೊಳೆಯಿರಿ.
ಒಣಗಿದ ನೆಲ್ಲಿಕಾಯಿಯನ್ನು ಕೊಬ್ಬರಿ ಎಣ್ಣೆಗೆ ಹಾಕಿ ಕುದಿಸಿ. ನಂತರ ಈ ಎಣ್ಣೆಯನ್ನು ಸ್ಕಾಲ್ಪ್‌ಗೆ ಮಸಾಜ್ ಮಾಡಿ. ಇದು ಮೆಲನಿನ್ ನೀಡಿ ಕೂದಲನ್ನು ಕಪ್ಪಾಗಿಸುತ್ತದೆ.
ಕರಿಬೇವು ಸೊಪ್ಪನ್ನು ಕೊಬ್ಬರಿ ಎಣ್ಣೆಗೆ ಹಾಕಿ ಕುದಿಸಿ ಹಚ್ಚಿ.
ಸದಾ ತಲೆಸ್ನಾನದ ನಂತರ ಟೀ ಅಥವಾ ಕಾಫಿಯ ಡಿಕಾಕ್ಷನ್‌ನಿಂದ ತಲೆಯನ್ನು ತೊಳೆಯಿರಿ.
ಐರನ್, ಝಿಂಕ್, ವಿಟಮಿನ್ಸ್ ಇರುವ ಆಹಾರ ಸೇವನೆ ಮಾಡೋದು ಅತ್ಯುತ್ತಮ.



