April 17, 2026
Friday, April 17, 2026
spot_img

VIRAL | ಮತ್ತೆ ಬಂತಾ ಝೋಂಬಿ ವೈರಸ್‌? ವಿಚಿತ್ರ ಭಂಗಿಯಲ್ಲಿ ಗಂಟೆಗಟ್ಟಲೆ ನಿಂತುಬಿಟ್ಟ ಯುವಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ನಡುರಸ್ತೆಯಲ್ಲೇ ವಿಚಿತ್ರವಾದ ಭಂಗಿಯಲ್ಲಿ ಗಂಟೆಗಟ್ಟಲೆ ನಿಂತಿದ್ದ. ಆತ ಝೋಂಬಿ ಡ್ರಗ್ಸ್‌ ತೆಗೆದುಕೊಂಡಿದ್ದನಾ ಎನ್ನುವ ಆತಂಕ ಎದುರಾಗಿತ್ತು. ಇದೀಗ ಮುಂಬೈನಲ್ಲಿಯೂ ಇಂಥದ್ದೇ ಪ್ರಕರಣ ಕಂಡಿದೆ.

ಮಹಾರಾಷ್ಟ್ರದ ಮೀರಾ ಭಯಂದರ್ ರಸ್ತೆಯಲ್ಲಿ ಯುವಕನೊಬ್ಬ ವಿಚಿತ್ರ ಭಂಗಿಯಲ್ಲಿ ನಿಂತಿದ್ದು ಸಾರ್ವಜನಿಕರಲ್ಲಿ ಕಳವಳವನ್ನು ಹುಟ್ಟುಹಾಕಿದೆ. ತನ್ನ ಸುತ್ತಲೂ ಏನು ನಡೆಯುತ್ತಿದೆ ಎಂಬುದೇ ಆತನ ಅರಿವಿಗೆ ಬಾರದೇ ಸ್ತಬ್ಧನಾಗಿ ನಿಂತಿದ್ದಾನೆ. ಸದ್ಯ ಈ ಆತಂಕಕಾರಿ ದೃಶ್ಯ ಸೋಷಿಯಲ್ ‌ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಆ ವ್ಯಕ್ತಿ ಒಂದು ಕಂಬದ ಬಳಿ ಮುಂದಕ್ಕೆ ಎರಗಿ ನಿಂತಿರುವುದು ಕಂಡು ಬಂದಿದೆ. ಈ ದೃಶ್ಯ ಕಂಡ ಅಲ್ಲಿನ ಜನರು ಇದು ಝಾಂಬಿ ಡ್ರಗ್ ಎಂದೇ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲಿದ್ದ ಹತ್ತಿರದ ಜನರು ಆತನನ್ನು ನೋಡುತ್ತಿರುವುದನ್ನು ಕಾಣಬಹುದು. ರಸ್ತೆಯಲ್ಲಿ ಟ್ರಕ್ ವೊಂದು ನಿಂತಿದ್ದು ಕೆಲವು ಪಾದಚಾರಿಗಳು ಅಲ್ಲೇ ಹಾದು ಹೋಗುತ್ತಾರೆ, ಆದರೆ ಆ ವ್ಯಕ್ತಿ ಅದೇ ಸ್ಥಾನದಲ್ಲಿಯೇ ಒಂದೆ ಭಂಗಿಯಲ್ಲಿ ಇರುತ್ತಾನೆ.

ಆತ ವಿಡಿಯೋಗಾಗಿ ಬೇಕಂತಲೇ ಹೀಗೆ ನಿಂತಿದ್ದಾನಾ ಅಥವಾ ನಿಜವಾಗಿಯೂ ಡ್ರಗ್ಸ್‌ ಎಫೆಕ್ಟ್‌ ಆಗಿದೆಯಾ ಈವರೆಗೂ ತಿಳಿದುಬಂದಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !