October 15, 2026
Thursday, October 15, 2026
spot_img

ಟ್ರೆಕ್ಕಿಂಗ್‌ ಹೋಗೋರಿಗೆ ಹೊಸ ರೂಲ್ಸ್‌, ಅವಘಡಗಳನ್ನು ತಪ್ಪಿಸೋಕೆ ಮಾಸ್ಟರ್‌ ಪ್ಲಾನ್‌

ರಾಜ್ಯದಲ್ಲಿ ಟ್ರೆಕ್ಕಿಂಗ್‌ ಹೋಗುವ ವೇಳೆ ಸಾಕಷ್ಟು ಅವಘಡಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸ್ಟ್ರಿಕ್ಟ್‌ ರೂಲ್ಸ್‌ ಮಾಡಿದೆ.

ಪ್ರಮಾಣಿತ ಕಾರ್ಯಾಚರಣೆ ವಿಧಾನ ಜಾರಿಗೆ ತಂದಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಬೆಂಗಳೂರಿನ ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್‌ನಲ್ಲಿ ಎಸ್‌ಒಪಿ ಬಿಡುಗಡೆ ಮಾಡಿ ಮಹತ್ವದ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ 44 ಚಾರಣ ಪಾಯಿಂಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಕೊಡಗು ತಡಿಯಾಂಡಮೊಳ್ ಸೇರಿದಂತೆ ಹಲವು ಕಡೆಗಳಲ್ಲಿ ಚಾರಣಕ್ಕೆ ತೆರಳಿದವರು ನಾಪತ್ತೆಯಾಗಿರುವುದು ಹಾಗೂ ಚಿಕ್ಕಮಗಳೂರಿನಲ್ಲಿ ಬಾಲಕಿ ಸಾವನ್ನಪ್ಪಿದ ಘಟನೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಏನೆಲ್ಲಾ ರೂಲ್ಸ್‌?

ಟ್ರೆಕ್ಕಿಂಗ್‌ ಹೋಗೋಕೆ ಇಷ್ಟಪಡೋರು ಮೊದಲು ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ ಮಾಡ್ಕೋಬೇಕು.

ಹತ್ತು ಮಂದಿಯ ಗ್ರೂಪ್‌ಗೆ ಒಬ್ಬರು ಗೈಡ್‌ ಕಡ್ಡಾಯವಾಗಿ ಇರಲೇಬೇಕು. ಗೈಡ್‌ ಇಲ್ಲದೆ ಟ್ರೆಕ್ಕಿಂಗ್‌ ಮಾಡುವಂತಿಲ್ಲ.

ಟ್ರೆಕ್ಕಿಂಗ್‌ ಹೋಗುವವರ ಫೋನ್‌ನಲ್ಲಿ ಟ್ರ್ಯಾಕಿಂಗ್‌ ಆಪ್‌ ಹಾಕಿಕೊಳ್ಳಬೇಕು.

ಗೈಡ್‌ಗಳ ಬಳಿ ಜಿಪಿಎಸ್ ಸೌಲಭ್ಯ ಇರುವ ವಾಕಿಟಾಕಿ ಇರಬೇಕು.

ಒಂದು ಸಮಯಕ್ಕೆ ಬರೀ 150 ಮಂದಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.

ಟಾರ್ಚ್, ಹೆಡ್ ಲ್ಯಾಂಪ್ ಸೇರಿದಂತೆ ಅಗತ್ಯ ಸುರಕ್ಷತಾ ಉಪಕರಣಗಳನ್ನು ಕಡ್ಡಾಯವಾಗಿ ಹೊಂದಿರಬೇಕು.

ಏನೆಲ್ಲಾ ರೂಲ್ಸ್‌?

Must Read