June 15, 2026
Monday, June 15, 2026
spot_img

ಬ್ಯಾಂಕಾಕ್‌ನಲ್ಲಿ ಆ್ಯಕ್ಷನ್ ಮೂಡ್: ಹನಿಮೂನ್ ಅಲ್ಲ, ಸಿನಿಮಾಗೆ ರಶ್ಮಿಕಾ ಫುಲ್ ಫೋಕಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ರಶ್ಮಿಕಾ ಮಂದಣ್ಣ ವಿದೇಶ ಪ್ರವಾಸದ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ಮದುವೆಯಾದ ಅವರು ಬ್ಯಾಂಕಾಕ್‌ಗೆ ತೆರಳಿರುವುದು ಹನಿಮೂನ್‌ಗಾಗಿ ಅಲ್ಲ, ಬದಲಿಗೆ ಸಿನಿಮಾಗಾಗಿ ಆ್ಯಕ್ಷನ್ ತರಬೇತಿ ಪಡೆಯಲು ಎಂಬುದು ಬಹಿರಂಗವಾಗಿದೆ.

ರಶ್ಮಿಕಾ ಅಭಿನಯಿಸುತ್ತಿರುವ ‘ಮೈಸಾ’ ಎಂಬ ಮಹಿಳಾ ಪ್ರಧಾನ ಚಿತ್ರದಲ್ಲಿ ಆ್ಯಕ್ಷನ್ ದೃಶ್ಯಗಳು ಪ್ರಮುಖವಾಗಿದ್ದು, ಅದಕ್ಕಾಗಿ ಅವರು ವಿಶೇಷ ತರಬೇತಿ ಪಡೆಯುತ್ತಿದ್ದಾರೆ. ಶೂಟಿಂಗ್‌ಗೆ ಮುನ್ನವೇ ಪಾತ್ರಕ್ಕೆ ತಯಾರಾಗಲು ಅವರು ದಿನಕ್ಕೆ ಸುಮಾರು 8 ಗಂಟೆಗಳಷ್ಟು ಕಠಿಣ ಅಭ್ಯಾಸ ಮಾಡುತ್ತಿರುವುದು ಗಮನ ಸೆಳೆಯುತ್ತಿದೆ.

ಇದನ್ನೂ ಓದಿ:

ಈ ತರಬೇತಿಯಲ್ಲಿ ಹ್ಯಾಂಡ್ ಟು ಹ್ಯಾಂಡ್ ಕಾಂಬ್ಯಾಟ್ ತಂತ್ರಗಳನ್ನು ಅವರು ಕಲಿಯುತ್ತಿದ್ದು, ಪಾತ್ರದ ತೂಕ ಹೆಚ್ಚಿಸಲು ಶ್ರಮಿಸುತ್ತಿದ್ದಾರೆ. ನಟಿಯ ಸಮರ್ಪಣೆ ಮತ್ತು ಪರಿಶ್ರಮ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಮದುವೆಯ ನಂತರ ವಿಶ್ರಾಂತಿ ಅಥವಾ ಪ್ರವಾಸಕ್ಕೆ ತೆರಳಬಹುದಾಗಿದ್ದರೂ, ರಶ್ಮಿಕಾ ತಮ್ಮ ವೃತ್ತಿಜೀವನಕ್ಕೆ ಆದ್ಯತೆ ನೀಡಿರುವುದು ವಿಶೇಷವಾಗಿದೆ. ಅವರ ಈ ನಿರ್ಧಾರಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !